ದೇಶದಲ್ಲಿ ಭಯೋತ್ಪಾದನೆಯನ್ನು ನಿಯಂತ್ರಿಸಲು ಸರ್ವಪಕ್ಷ ಸಭೆಯನ್ನು ಕರೆಯಬೇಕು ಮತ್ತು, ಭಯೋತ್ಪಾದನೆಯ ಕುರಿತಾಗಿ ಕೇಂದ್ರ ಸರಕಾರವು ಶ್ವೇತಪತ್ರವನ್ನು ಹೊರಡಿಸಬೇಕು ಬಿಜೆಪಿಯು ಕೇಂದ್ರವನ್ನು ಒತ್ತಾಯಿಸಿದೆ.
ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವುದರಿಂದ ಭಯೋತ್ಪಾದನೆ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ವಪಕ್ಷ ಸಭೆ ನಡೆಸುವುದರೊಂದಿಗೆ ಸರಕಾರವು ಶ್ವೇತಪತ್ರವನ್ನು ಹೊರಡಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್ ಕತಿಯಾರ್ ಒತ್ತಾಯಿಸಿದ್ದಾರೆ.
ಸರಕಾರವು ಒಂದು ಕಡೆ ಅಲ್ಪಸಂಖ್ಯಾತರ ಒಲೈಕೆ ನೀತಿಯನ್ನು ಪಾಲಿಸುತ್ತಿದ್ದು, ಇನ್ನೊಂದು ಕಡೆ ಭಯೋತ್ಪಾದನೆಯನ್ನು ಸುದೃಢ ರೀತಿಯಲ್ಲಿ ನಿಗ್ರಹಿಸುವ ಕುರಿತು ಮಾತುಗಳನ್ನಾಡುತ್ತಿದೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
ಸಂಸತ್ ಭವನದ ಮೇಲೆ ದಾಳಿ ನಡೆಸಿರುವ ಆರೋಪಿ ಅಫ್ಜಲ್ ಗುರುವನ್ನು ರಕ್ಷಿಸಲು, ಯುಪಿಎ ಸರಕಾರವು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕತಿಯಾರ್, ರಾಷ್ಟ್ರ ವಿರೋಧಿ ಸಂಘಟನೆ ಸಿಮಿಯನ್ನು ಸಮಾಜವಾದಿ ಪಕ್ಷ ಮತ್ತು ಆರ್ಎಲ್‌ಡಿ ಬೆಂಬಲಿಸುತ್ತಿದೆ ಎಂದು ಟೀಕಿಸಿದರು.
|