ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಹಮದಬಾದ್ ಸ್ಫೋಟ ರೂವಾರಿ ಬಶೀರ್ ಸಹಿತ 10 ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಬಾದ್ ಸ್ಫೋಟ ರೂವಾರಿ ಬಶೀರ್ ಸಹಿತ 10 ಸೆರೆ
ಅಹಮದಾಬಾದಿನಲ್ಲಿ ಜುಲೈ 26ರಂದು ಉಗ್ರರು ನಡೆಸಿರುವ ಭೀಕರ ಸರಣಿ ಸ್ಫೋಟ ಸಂಚನ್ನು ಪತ್ತೆಹಚ್ಚಿದ್ದು, ಇದರ ರೂವಾರಿ ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಿರುವುದಾಗಿ ಗುಜರಾತ್ ಪೊಲೀಸರು ಶನಿವಾರ ದೃಢಪಡಿಸಿದ್ದಾರೆ.

ಮುಫ್ತಿ ಅಬು ಬಶೀರ್ ಎಂಬ ಸಿಮಿ ಕಾರ್ಯಕರ್ತನನ್ನು ಉತ್ತರಪ್ರದೇಶದ ಅಜಮ್‌ಗಢದಲ್ಲಿ ಬಂಧಿಸಲಾಗಿದೆ ಎಂದು ಗುಜರಾತ್ ಡಿಜಿಪಿ ಪಿ.ಸಿ. ಪಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಬು ಬಶೀರ್ ಅಲ್ಲದೆ, ಇತರ ಒಂಭತ್ತು ಕಾರ್ಯಕರ್ತರನ್ನು ಅಹಮದಾಬಾದ್ ಸ್ಫೋಟ ಹಾಗೂ, ಸೂರತ್‌ನಲ್ಲಿ ಸಜೀವ ಬಾಂಬ್ ಇರಿಸಿರುವ ಕುಕೃತ್ಯಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದಾಗಿ ಅವರು ತಿಳಿಸಿದರು. ಬಂಧಿತರಲ್ಲಿ ಇಬ್ಬರಿಗೆ ಪಾಕಿಸ್ತಾನದ ಲಷ್ಕರೆ-ಇ-ತೋಯ್ಬಾ ಜತೆಗೆ ಸಂಪರ್ಕವಿರುವುದಾಗಿ ತನಿಖೆಯಿಂದ ಗೊತ್ತಾಗಿದೆ.

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದ್ದ ಭಾರತೀಯ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯು ವಿಬಿನ್ನ ಹೆಸರಲ್ಲಿ ಸಿಮಿಯಿಂದ ಕಾರ್ಯನಿರ್ವಹಣೆಗೊಳ್ಳುತ್ತಿರುವ ಸಂಸ್ಥೆಯಾಗಿದೆ ಎಂಬ ವಿಚಾರವನ್ನು ಪಾಂಡೆ ಬಹಿರಂಗಗೊಳಿಸಿದ್ದಾರೆ.

ಗುಜರಾತ್ ಪೊಲೀಸ್ ಮತ್ತು ಉತ್ತರ ಪ್ರದೇಶ ಪೊಲೀಸರಿಂದ ಉತ್ತರಪ್ರದೇಶದ ಅಜಮ್ಗಾರ್‌ನಲ್ಲಿ ಅಬು ಬಶೀರ್‌ನನ್ನು ಬಂಧಿಸಲಾಗಿದ್ದು, ಆತನನ್ನು ಗುಜರಾತಿಗೆ ಸದ್ಯದಲ್ಲಿಯೇ ಕರೆತರಲಾಗುವುದು ಎಂದು ಪಾಂಡೆ ಸ್ಪಷ್ಟಪಡಿಸಿದ್ದಾರೆ. ಸಿಮಿಯ ಹಲವಾರು ನೆಲೆಗಳನ್ನು ಪತ್ತೆ ಹಚ್ಚಿರುವುದಾಗಿಯೂ ಪಾಂಡೆ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರವನ್ನು ನಡುಗಿಸಿದ ಎಲ್ಲ ಬೃಹತ್ ಸ್ಫೋಟ ಕಾರ್ಯಾಚರಣೆಯಲ್ಲಿ ಸಿಮಿಯ ಕೈವಾಡ ಇದೆ ಎಂದು ಪೊಲೀಸಧಿಕಾರಿ ತಿಳಿಸಿದ್ದಾರೆ. ಗುಜರಾತ್, ಉತ್ತರ ಪ್ರದೇಶ, ದೆಹಲಿ, ಜೈಪುರ, ಮಹಾರಾಷ್ಟ್ರ ಮತ್ತು ಹೈದರಾಬಾದ್‌ಗಳಲ್ಲಿ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ.

ದೋಷಪೂರಿತ ಚಿಪ್‌ಗಳ ಕಾರಣ ಸೂರತ್‌ನಲ್ಲಿ ಪತ್ತೆಯಾಗಿರುವ ಸಜೀವ ಬಾಂಬ್‌ಗಳು ಸ್ಫೋಟಗೊಂಡಿಲ್ಲ ಎಂದು ಪಾಂಡೆ ನುಡಿದರು.
ಮತ್ತಷ್ಟು
ಅಸ್ಸಾಂ ಬಾಂಬ್ ಸ್ಫೋಟ: ಉಲ್ಫಾ ಕೈವಾಡ ಶಂಕೆ
ಉನ್ನತ ಮಟ್ಟದ ಸಮಿತಿಯಿಂದ ಜಮ್ಮು ಸ್ಥಿತಿ ಅವಲೋಕನ
ಉಗ್ರವಾದ: ಶ್ವೇತಪತ್ರ ಹೊರಡಿಸಲು ಬಿಜೆಪಿ ಒತ್ತಾಯ
ಸಿಂಗ್ ಪ್ರಧಾನಮಂತ್ರಿ ಅಭ್ಯರ್ಥಿ: ಸೋನಿಯಾ
ಹಣದುಬ್ಬರ ನಿಯಂತ್ರಣಕ್ಕೆ ಸುದೃಢ ಕ್ರಮ: ಪ್ರಧಾನಿ
ಒಡೆಯದಿರಿ, ಒಂದಾಗಿ: ಪ್ರಧಾನಿ ಸಂದೇಶ