ಹರಿಯಾಣದ ಯಮುನಾನಗರ್ ಸಮೀಪದ ತಾಜೇವಾಲದಿಂದ 1.50 ಲಕ್ಷ ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಟ್ಟ ಪರಿಣಾಮವಾಗಿ, ಯಮುನಾನದಿಯು ಅಪಾಯಮಟ್ಟಕ್ಕಿಂತ ಮೇಲ್ಮಟ್ಟದಲ್ಲಿ ಹರಿಯುತ್ತಿದ್ದು, 50 ಜಿಲ್ಲೆಗಳ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ಹೆಚ್ಚಿನ ಗ್ರಾಮಸ್ಥರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಈಗಾಗಲೇ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದಾರೆ. ಇದರೊಂದಿಗೆ, ನೀರು ಹರಿವಿನಿಂದಾಗಿ ಹೆಚ್ಚಿನ ಗ್ರಾಮಗಳ ಬೆಳೆಗಳು ನೆರೆಯಿಂದಾಗಿ ನಾಶವಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಹೆಚ್ಚಿನ ಜಮೀನು ಮಳೆನೀರಿಗೆ ಕೊಚ್ಚಿಹೋಗಿದ್ದು, ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಹಲವು ಗ್ರಾಮಗಳಲ್ಲಿ ತರಕಾರಿ ಸೇರಿದಂತೆ ಹೆಚ್ಚಿನ ಬೆಳೆಗಳು ನಾಶ ಹೊಂದಿವೆ.
|