ಸಟ್ಲೇಜ್ ನದಿಯ ಪ್ರವಾಹವು ಉಕ್ಕೇರಿದ ಪರಿಣಾಮ ಪಂಜಾಬ್‌ನ ಹತ್ತು ಜಿಲ್ಲೆಗಳು ಕೊಚ್ಚಿಹೋಗಿದ್ದು, ಪರಿಹಾರಕ್ಕಾಗಿ ಸೇನೆಯನ್ನು ಕರೆಸಲಾಗಿದ್ದು, ಕಾರ್ಯಾಚರಣೆ ಪ್ರಾರಂಭಗೊಂಡಿದೆ.
ಮುಂಡಿಕಾಲು ಗ್ರಾಮದಲ್ಲಿ ಚಿಟ್ಟಿ ಬೀನ್ ತೊರೆಯು ಸಟ್ಲೇಜ್ ನದಿಗೆ ಸೇರುವ ಜಾಗದಲ್ಲಿ ಕಟ್ಟೆ ಒಡೆದ ಪರಿಣಾಮವಾಗಿ ಈ ಪ್ರವಾಹ ಉಂಟಾಗಿದೆ.
ಪಂಜಾಬ್‌ನ ಮುಂಡಿಕಾಲು, ಮುಂಡಾಲಾ, ನಸೀರ್ಪುರ್, ಗಿಡ್ಡಾರ್ಪಿಂಡಿ, ಬರೇಜೋತ್ ಸಿಂಗ್, ನಹಲ್ ಮತ್ತು ಮನಕ್ ಗ್ರಾಮಗಳು ಪ್ರವಾಹ ಪೀಡಿತಗೊಂಡಿದ್ದು, ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
|