ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದಲ್ಲಿ ಸಂಬಂಧ ಹೊಂದಿರುವ ಆರೋಪದಲ್ಲಿ ಶನಿವಾರ ಬಂಧಿಸಲಾದ ಒಂಬತ್ತು ಸಿಮಿ ಕಾರ್ಯಕರ್ತರನ್ನು ರವಿವಾರ ಕೋರ್ಟಿಗೆ ಹಾಜರುಪಡಿಸಲಿದ್ದು, ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಮಾಸ್ಟರ್‌ಮೈಂಡ್ ಸಿಮಿ ಕಾರ್ಯಕರ್ತ ಉತ್ತರ ಪ್ರದೇಶದ ಮುಫ್ತಿ ಅಬು ಬಶೀರ್‌ನನ್ನು ಅಹಮದಾಬಾದಿಗೆ ಇಂದು ಕರೆ ತರಲಾಗುವುದು.
ಮೂರು ವಾರಗಳ ಹಿಂದೆ 57 ಜನರ ಸಾವಿಗೆ ಕಾರಣವಾದ ಅಹಮದಾಬಾದ್ ಸ್ಫೋಟದ ಹಿಂದೆ ಮುಫ್ತಿ ಬಶೀರ್ ಮತ್ತು ಇತರ ಬಂಧಿತ ಒಂಬತ್ತು ಸಿಮಿ ಕಾರ್ಯಕರ್ತರ ಕೈವಾಡವಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಶೀರ್ ಮತ್ತು ಇತರರು ಕೇರಳದ ಎರ್ನಾಕುಲಂನ ಅರಣ್ಯದಲ್ಲಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸ್ಫೋಟಕಗಳನ್ನು ಸಂಯೋಜಿಸುವ ಬಗ್ಗೆ ತರಬೇತಿ ನೀಡಲು ಸಿಮಿ ಈ ತರಬೇತಿ ಶಿಬಿರವನ್ನು ಆಯೋಜಿಸಿತ್ತು.
ನಂತರ ಏಪ್ರಿಲ್ ತಿಂಗಳಲ್ಲಿ ಅಹಮದಾಬಾದಿನಲ್ಲಿ ಬಶೀರ್ ಮತ್ತು ಇತರರು ಫ್ಲಾಟ್‌ನ್ನು ಬಾಡಿಗೆಗೆ ಖರೀದಿಸಿ ಬಾಂಬ್ ಯೋಜನೆಯ ಬಗ್ಗೆ ಮಾತುಕತೆ ನಡೆಸುತ್ತಿದ್ದರು.
ಮೊಬೈಲ್ ಫೋನ್ ಮತ್ತು ಸೈಕಲ್‌ಗಳನ್ನು ಅಹಮದಾಬಾದ್ ಮತ್ತು ಬರೋಡಾದಿಂದ ಖರೀದಿಸಿ ನಂತರ ಜುಲೈ 26ರಂದು ಅಹಮದಾಬಾದಿನಾದ್ಯಂತ ಬಾಂಬ್ ಸ್ಫೋಟಕ್ಕೆ ಅಂತಿಮ ರೂಪು ನೀಡಿದ್ದರು.
|