ಗುರುವಾರ ವಿಯೆನ್ನಾದಲ್ಲಿ ನಡೆಯಲಿರುವ ಪರಮಾಣು ಪೂರೈಕಾ ಸಮೂಹದ(ಎನ್ಎಸ್‌ಜಿ) ವಿಶೇಷ ಸರ್ವಸದಸ್ಯ ಸಮಾವೇಶದ ಮುಂದಾಗಿ, ಅಮೆರಿಕವು ಪೂರೈಕೆದಾರರಿಗೆ ವಿತರಿಸಿದ ಕರಡಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡದಂತೆ ಎನ್‌ಎಸ್‍ಜಿಯಿಂದ ಭಾರತವು ವಿನಾಯತಿ ಬಯಸಲಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಜುಲೈ 18,2005ರ ತಿಳುವಳಿಕೆಯೊಂದಿಗೆ, ಸಮಂಜಸ ಮಾದರಿಯಲ್ಲಿ ಸಂಪೂರ್ಣ ಪ್ರಕ್ರಿಯೆಯು ಸಾಗುವ ನಿರೀಕ್ಷೆಯನ್ನು ಭಾರತವು ಹೊಂದಿದೆ.
ಮಾಡಬೇಕಾಗಿರುವುದೆಲ್ಲವನ್ನೂ ಮಾಡಿಯಾಗಿದೆ. ಇತ್ತೀಚೆಗೆ ವಿತರಿಸಲಾದ ಕರಡಿನಲ್ಲಿ ಯಾವುದೇ ಬದಲಾವಣೆಯನ್ನು ಮಾಡದಂತೆ ಎನ್‌ಎಸ್‌ಜಿಯಿಂದ ವಿನಾಯತಿಯನ್ನು ಬಯಸುತ್ತಿದ್ದೇವೆ ಎಂದು ಪರಮಾಣು ಇಂಧನ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪರಮಾಣು ವ್ಯವಹಾರಕ್ಕೆ ಭಾರತಕ್ಕೆ ವಿನಾಯತಿ ನೀಡುವ ಕುರಿತಾಗಿ ಮಾತುಕತೆ ನಡೆಸಲು, ಆಗಸ್ಟ್ 21ರಿಂದ ಎನ್ಎಸ್‌ಸಿಯು ವಿಶೇಷ ಸರ್ವಸದಸ್ಯ ಸಭೆಯನ್ನು ನಡೆಸಲಿದೆ.
ದೀರ್ಘಾವಧಿಯ ಜಾಗತಿಕ ಪರಮಾಣು ವ್ಯಾಪಾರದಿಂದ ಭಾರತಕ್ಕೆ ವಿನಾಯತಿ ನೀಡುವ ಅಮೆರಿಕದ ಪ್ರಸ್ತಾಪವನ್ನು ತಿರಸ್ಕರಿಸುವಂತೆ ಪರಮಾಣು ನಿಶ್ಯಸ್ತ್ರೀಕರಣ ಪರಿಣಿತರು ಮತ್ತು ಎನ್‌ಜಿಒಗಳು ಎನ್ಎಸ್‌ಜಿಗೆ ಕಳುಹಿಸಿರುವ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಕೋಡ್ಕರ್, ಜುಲೈ 18,2005ರ ತಿಳುವಳಿಕೆಗೆ ಅನುಗುಣವಾಗಿ ಪ್ರಕ್ರಿಯೆಯು ಸಾಗುವ ನಿರೀಕ್ಷೆಯಿದ್ದು, ಎನ್ಎಸ್‌ಜಿಯಲ್ಲಿನ ಯಾವುದೇ ಬದಲಾವಣೆಯು ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.
|