ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಹುರಿಯತ್ ನಾಯಕರು ಶ್ರೀನಗರದಲ್ಲಿ ಬೃಹತ್ ರ‌್ಯಾಲಿ ನಡೆಸುವ ಮತ್ತು ವಿಶ್ವಸಂಸ್ಥೆ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ರಾಜಧಾನಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.

ಹುರಿಯತ್ ನಾಯಕರು ಶಾಂತಿಯುತ ಪ್ರತಿಭಟನೆಯು ಹಿಂಸಾರೂಪಕ್ಕೆ ತೆರಳುವ ಸಾಧ್ಯತೆಯಿರುವುದರಿಂದ ಯಾವುದೇ ಅಹಿತಕರ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದೆ.

ತನ್ನ ಪ್ರತಿಭಟನಾ ಸ್ಥಳವನ್ನು ವಿಶ್ವಸಂಸ್ಥೆ ಕಚೇರಿಯಿಂದ ಅದರ ಸಮೀಪವಿರುವ ಮೈದಾನದಲ್ಲಿ ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಕಣಿವೆ ಪ್ರದೇಶದಲ್ಲಿ ಆರ್ಥಿಕ ನಿರ್ಬಂಧ ಹೇರಿರುವ ಫಲವಾಗಿ ಉಂಟಾಗಿರುವ ಕಾಶ್ಮೀರ ವಿವಾದಕ್ಕೆ ಖಾಯಂ ಪರಿಹಾರ ನೀಡುವಲ್ಲಿ ವಿಶ್ವಸಂಸ್ಥೆಯು ಭಾಗಿಯಾಗಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ವಿಶ್ವಸಂಸ್ಥೆಗೆ ಸಲ್ಲಿಸಲಾಗುವುದು ಎಂದು ಹುರಿಯತ್ ನಾಯಕ ಸೈಯದ್ ಅಲಿ ಶಾ ಗಿಲಾನಿ ತಿಳಿಸಿದ್ದಾರೆ.

ಜನರ ವಿರುದ್ಧ ನಿಷ್ಕರುಣಿ ಪಡೆಗಳ ಬಳಕೆಯನ್ನು ಹಿಂತೆಗೆಯುವಂತೆ ಮತ್ತು ಜಮ್ಮು ಮುಸ್ಲಿಮರ ಮೇಲೆ ಹಿಂಸಾಚಾರ, ಶೋಷಣೆ ಮತ್ತು ತಾರತಮ್ಯ ಮನೋಭಾವವನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಲು ವಿಶ್ವಸಂಸ್ಥೆಯು ಅಧಿಕಾರಿಗಳನ್ನು ನೇಮಿಸುವಂತೆ ಹುರಿಯತ್ ವಿಶ್ವಸಂಸ್ಥೆಗೆ ಮನವಿ ಮಾಡಿದೆ ಎಂದು ಅವರು ಹೇಳಿದ್ದಾರೆ.

ಮಂಗಳವಾರ, ಬುಧವಾರ ಮತ್ತು ಗುರುವಾರ ಯಾವುದೇ ಪ್ರತಿಭಟನೆಯನ್ನು ನಡೆಸುವುದಿಲ್ಲ ಎಂದು ಹುರಿಯತ್ ನಾಯಕ ಇದೇ ವೇಳೆ ಸ್ಪಷ್ಟಪಡಿಸಿದ್ದು, ಶುಕ್ರವಾರದಂದು ಹುತಾತ್ಮರ ನೆನಪಿಗಾಗಿ ಶ್ರೀನಗರದ ಈದ್ಗಾಗೆ ಮೆರವಣಿಗೆ ನಡೆಸಲಾಗುವುದು ಎಂದು ಸೂಚಿಸಿದ್ದಾರೆ.
ಮತ್ತಷ್ಟು
ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ
ಎನ್ಎಸ್‌ಜಿಯಿಂದ ವಿನಾಯತಿ ನಿರೀಕ್ಷಿಸುತ್ತಿರುವ ಭಾರತ
ಬಂಧಿತ ಉಗ್ರರು 14 ದಿನಗಳ ಕಾಲ ಪೊಲೀಸ್ ವಶಕ್ಕೆ
ಜೆಎಂಎಂ ಬೆಂಬಲ ವಾಪಸಾತಿ; ಸ್ಥಾನ ತೊರೆಯಲು ಕೋಡಾ ನಕಾರ
ನಟ ಚಿರಂಜೀವಿ ರಾಜಕೀಯಕ್ಕೆ ಅಧಿಕೃತ ಪ್ರವೇಶ
ಜೈಪುರ ಬಾಂಬ್ ಸ್ಫೋಟ: ಮೂವರ ಬಂಧನ