ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ಅಮರನಾಥ ದೇವಾಲಯಕ್ಕೆ ಭೂಮಿ ಹಸ್ತಾಂತರ ಕುರಿತಾದ ಪ್ರಕರಣದಲ್ಲಿನ ತೀವ್ರ ರಾಜಕೀಯದಿಂದ ಧೈರ್ಯಗುಂದದ ಪ್ರಧಾನಿ ಮನಮೋಹನ್ ಸಿಂಗ್, ಈ ವಿವಾದಕ್ಕೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳುವಂತೆ ರಾಜಕೀಯ ಪಕ್ಷಗಳಿಗೆ ಸೋಮವಾರ ಕರೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಸೂಕ್ಷ್ಮ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದು ಪಕ್ಷಕ್ಕೆ ಸಂಬಂಧಪಟ್ಟ ವಿಚಾರವಲ್ಲ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯ ನಿಯಂತ್ರಣವು ಎಲ್ಲರ ಹೊಣೆಯಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಆಲ್ ಇಂಡಿಯಾ ಹುರಿಯತ್ ಕಾನ್ಫರೆನ್ಸ್ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶ್ವಸಂಸ್ಥೆ ಕೇಂದ್ರ ಕಾರ್ಯಾಲಯಕ್ಕೆ ರ‌್ಯಾಲಿ ನಡೆಸಿರುವ ಬೆನ್ನಲ್ಲೇ, ಪ್ರಧಾನಮಂತ್ರಿಗಳ ಈ ಹೇಳಿಕೆ ಹೊರಬಿದ್ದಿದೆ.
ಮತ್ತಷ್ಟು
ತಸ್ಲೀಮಾ ವೀಸಾ ಅವಧಿ ವಿಸ್ತರಣೆ
ಜೈಪುರ ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ವಿಚಾರಣೆ
ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ
ಎನ್ಎಸ್‌ಜಿಯಿಂದ ವಿನಾಯತಿ ನಿರೀಕ್ಷಿಸುತ್ತಿರುವ ಭಾರತ
ಬಂಧಿತ ಉಗ್ರರು 14 ದಿನಗಳ ಕಾಲ ಪೊಲೀಸ್ ವಶಕ್ಕೆ