ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
PIB
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಮಾಜಿ ಆರ್‌ಬಿಐ ಗವರ್ನರ್ ಸಿ. ರಂಗರಾಜನ್ ಅವರುಗಳು ರಾಜ್ಯಸಭಾ ಸದಸ್ಯರಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಸಭಾ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಪ್ರಮಾಣ ವಚನ ಬೋಧಿಸಿದರು.

ಪ್ರಧಾನ ಮಂತ್ರಿಯವರ ವಿತ್ತ ಸಲಹಾ ಸಮತಿಯ ಅಧ್ಯಕ್ಷರಾಗಿದ್ದ ರಂಗರಾಜನ್ ಅವರು ನಾಮನಿರ್ದೇಶಿತ ಸದಸ್ಯರಾಗಿದ್ದರೆ, ಕೃಷ್ಣ ಅವರನ್ನು ಕರ್ನಾಟಕ ವಿಧಾನಮಂಡಲವು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.

ರಂಗರಾಜನ್ ಅವರ ಸೇರ್ಪಡೆಯೊಂದಿಗೆ ಇದೀಗ ಮೇಲ್ಮನೆಯಲ್ಲಿ ಮೂವರು ಮಾಜಿ ಆರ್‌ಬಿಐ ಗವರ್ನರ್‌ಗಳಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬಿಮಲ್ ಜಲನ್ ಅವರು ಇನ್ನಿಬ್ಬರು ಮಾಜಿ ಆರ್‌ಬಿಐ ಗವರ್ನರ್‌ಗಳಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಮರಳಲು ತೀವ್ರ ಉತ್ಸುಕರಾಗಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆ ಷೋಷಣೆಯ ಬಳಿಕ ತನ್ನ ಸ್ಥಾನತ್ಯಜಿಸಿದ್ದರು.
ಮತ್ತಷ್ಟು
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ತಸ್ಲೀಮಾ ವೀಸಾ ಅವಧಿ ವಿಸ್ತರಣೆ
ಜೈಪುರ ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ವಿಚಾರಣೆ
ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ
ಎನ್ಎಸ್‌ಜಿಯಿಂದ ವಿನಾಯತಿ ನಿರೀಕ್ಷಿಸುತ್ತಿರುವ ಭಾರತ