ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪ್ರತ್ಯೇಕತಾವಾದಿಗಳಿಂದ ವಿಶ್ವಸಂಸ್ಥೆಗೆ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರತ್ಯೇಕತಾವಾದಿಗಳಿಂದ ವಿಶ್ವಸಂಸ್ಥೆಗೆ ಮನವಿ
ಜಮ್ಮು ಮತ್ತು ಕಾಶ್ಮೀರದಲ್ಲಿ 'ಕ್ರಿಯಾತ್ಮಕವಾಗಿ ಕಾರ್ಯಾಚರಿಸಬೇಕು' ಎಂದು ವಿನಂತಿಸಿ, ಪ್ರತ್ಯೇಕತಾವಾದಿಗಳು ಇಲ್ಲಿನ ವಿಶ್ವಸಂಸ್ಥೆಯ ಕಚೇರಿಗೆ ಮನವಿಪತ್ರ ಸಲ್ಲಿಸಿದ್ದಾರೆ.

ಹುರಿಯತ್ ಕಾನ್ಫರೆನ್ಸ್ ಮತ್ತು ಅದರ ಸಮೂಹಗಳಿಂದ ಸಂಘಟಿಸಲ್ಪಟ್ಟಿದ್ದ ರ‌್ಯಾಲಿಯಲ್ಲಿ ಭಾಗವಹಿಸಲು ಅಗಾಧ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಹುರಿಯತ್ ಕಾನ್ಫರೆನ್ಸ್ ನಾಯಕರಾದ ಜಾವಿದ್ ಅಹ್ಮದ್ ಮಿರ್ ಮತ್ತು ಝಫರ್ ಅಬರ್ ಭಟ್ ವಿಶ್ವಸಂಸ್ಥೆಯ ಸೇನಾ ಪರಿವೀಕ್ಷಣೆ ಸಮೂಹದ ಸ್ಥಳೀಯ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.

ಈ ನಡುವೆ, ಟೂರಿಸ್ಟ್ ರಿಸೆಪ್ಶನ್ ಕೇಂದ್ರ ಮೈದಾನದಿಂದ ಕಿಲೋಮೀಟರ್‌ಗಳ ಅಂತರದಲ್ಲಿ ವಿಶ್ವಸಂಸ್ಥೆ ಕಚೇರಿಗೆ ಆಗಮಿಸುವ ವೇಳೆ ಸೋನಾವರ್‌ನಲ್ಲಿ ಪೊಲೀಸರು ತಡೆಯೊಡ್ಡಿದರು ಎಂದು 100 ಮಂದಿ ಬೆಂಬಲಿಗರೊಂದಿಗೆ ಆಗಮಿಸಿದ್ದ ಮಿರ್ ಮತ್ತು ಭಟ್ ಆರೋಪಿಸಿದರು.

ಕುಪಿತಗೊಂಡ ಜನರು ಪೊಲೀಸರ ತಡೆಯನ್ನು ಭೇದಿಸಿ ರ‌್ಯಾಲಿಯ ಸ್ಥಳಕ್ಕೆ ತೆರಳಲು ಬಸ್, ಕಾರ್ ಮತ್ತು ಮೋಟಾರ್‌ಸೈಕಲ್‌‍ಗೆ ಅನುವು ಮಾಡಿಕೊಟ್ಟರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರತ್ಯೇಕತಾವಾದಿ ಸಹಕಾರ ಸಮಿತಿಯಿಂದ ರಚಿಸಲ್ಪಟ್ಟ ಮನವಿ ಪತ್ರದಲ್ಲಿ ವಿಶ್ವಸಂಸ್ಥೆ ಕಾರ್ಯದರ್ಶಿ ಬಾನ್ ಕಿ ಮೂನ್ ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಲಾಗಿದೆ.
ಮತ್ತಷ್ಟು
ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ತಸ್ಲೀಮಾ ವೀಸಾ ಅವಧಿ ವಿಸ್ತರಣೆ
ಜೈಪುರ ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ವಿಚಾರಣೆ
ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ