ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಮ್ಮು ಜೈಲ್‌ಭರೋ: ಸಾವಿರಾರು ಮಂದಿಯ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಮ್ಮು ಜೈಲ್‌ಭರೋ: ಸಾವಿರಾರು ಮಂದಿಯ ಬಂಧನ
ಅಮರನಾಥ ಮಂದಿರ ಮಂಡಳಿಗೆ ಜಮೀನು ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಶ್ರೀ ಅಮರನಾಥ ಸಂಘರ್ಷ ಸಮಿತಿ(ಎಸ್ಎಎಸ್ಎಸ್)ಯು ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಜಮ್ಮು ಪ್ರದೇಶದ ವಿವಿಧ ಪೊಲೀಸ್ ಠಾಣೆಗಳ ಎದುರು ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ಪ್ರತಿಭಟನಾಕಾರರು ಬಂಧನಕ್ಕೀಡಾದರು.

ಮೂರು ದಿವಸಗಳ ಜೈಲ್ ಭರೋ ಕಾರ್ಯಕ್ರಮ ನಡೆಸುತ್ತಿರುವ ಪ್ರತಿಭಟನಾಕಾರರು 'ಬಂ ಬಂ ಭೋಲೇ' ಘೋಷಣೆಯೊಂದಿಗೆ ಪೊಲೀಸ್ ಠಾಣೆಗಳಿಗೆ ಮೆರವಣಿಗೆ ತೆರಳಿದರು.

ಇವರನ್ನು ಬಂಧಿಸಿದ ಪೊಲೀಸರು, ವಾಹನಗಳಲ್ಲಿ ಶಾಲೆ ಮತ್ತು ಕ್ರೀಡಾಂಗಣದತ್ತ ಕರೆದೊಯ್ದರು. ಗುಂಪುಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿ ಅಶ್ರುವಾಯು ಸಿಡಿಸಿದರು ಎಂದು ಉಧಾಮ್‌ಪುರದ ವರದಿಗಳು ಹೇಳಿವೆ.

ಜೈಲ್‌ ಭರೋ ಕಾರ್ಯಕ್ರಮಕ್ಕಾಗಿ ಕತುವಾ, ಸಾಂಬ ಮತ್ತು ಆರ್.ಎಸ್.ಪುರಗಳಿಂದ ಪ್ರತಿಭಟನಾಕಾರರು ಹರಿದು ಬಂದಿದ್ದಾರೆ.

ಸುಮಾರು 100 ಎಕರೆ ಜಾಗವನ್ನು ಅಮರನಾಥ ಮಂದಿರ ಮಂಡಳಿಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಒಂದು ಲಕ್ಷಕ್ಕೂ ಅಧಿಕ ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ ಎಂದು ಎಸ್ಎಎಸ್ಎಸ್ ವಕ್ತಾರ ನರಿಂದರ್ ಸಿಂಗ್ ಹೇಳಿದ್ದಾರೆ.

ಏತನ್ಮಧ್ಯೆ, ಕಿಶ್ತ್ವಾರ್, ಜಮ್ಮು ಮತ್ತು ಉಧಾಮ್‌ಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ತಸ್ಲೀಮಾ ವೀಸಾ ಅವಧಿ ವಿಸ್ತರಣೆ
ಜೈಪುರ ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ವಿಚಾರಣೆ
ಹುರಿಯತ್ ನಾಯಕರಿಂದ ರ‌್ಯಾಲಿ: ಶ್ರೀನಗರದಲ್ಲಿ ಕರ್ಫ್ಯೂ
ಸಿಮಿಯ ಸುರಕ್ಷಿತ ತಾಣವಾಗಿ ಹೊರಹೊಮ್ಮುತ್ತಿರುವ ಕೇರಳ