ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜವಾಬ್ದಾರಿಯಿಂದ ವರ್ತಿಸಲು ಮಾಧ್ಯಮಗಳಿಗೆ ತಾಕೀತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜವಾಬ್ದಾರಿಯಿಂದ ವರ್ತಿಸಲು ಮಾಧ್ಯಮಗಳಿಗೆ ತಾಕೀತು
PTI
ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಇರುವ ಪ್ರಕರಣಗಳ ಕುರಿತು ವರದಿ ಮಾಡುವ ವೇಳೆಗೆ ಮಾಧ್ಯಮಗಳು 'ಹೆಚ್ಚಿನ ಜವಾಬ್ದಾರಿಯಿಂದ' ವರ್ತಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

ಅರುಷಿ ಕೊಲೆ ಪ್ರಕರಣದ ಉದಾಹರಣೆ ನೀಡಿರುವ ನ್ಯಾಯಾಲಯವು, ಮಾಧ್ಯಮಗಳ ಬೇಜವಾಬ್ದಾರಿಯ ವರದಿಗಾರಿಕೆಯಿಂದ ಬಲಿಪಶುವಿನ ಕುಟುಂಬದ ಘನತೆಗೆ ಹಾನಿಯಾಗಿದೆ ಎಂದು ಹೇಳಿದೆ.

ಸಬ್ ಜುಡೀಸ್ ಪ್ರಕರಣಗಳನ್ನು ವರದಿ ಮಾಡುವ ಕುರಿತು ಸಾಮಾನ್ಯ ನಿರ್ದೇಶಕ ತತ್ವಗಳನ್ನು ರೂಪಿಸಬೇಕಾದ ಅಗತ್ಯ ಇದೆ ಎಂದು ಒತ್ತಿ ಹೇಳಿದ ಸರ್ವೋಚ್ಚ ನ್ಯಾಯಾಲಯ, ನೋಯ್ಡಾದ ಅರುಷಿ ಹಾಗೂ ಆಕೆಯ ಮನೆಗೆಲಸದಾಳು ಹೇಮರಾಜ್ ಅವಳಿ ಕೊಲೆ ಪ್ರಕರಣಗಳನ್ನು ವರದಿ ಮಾಡಿರುವ ರೀತಿಗೆ ತನ್ನ ಅಸಮಾಧಾನ ಸೂಚಿಸಿತು.

"ನಾವು ನಮ್ಮ ಬಗ್ಗೆ ಚಿಂತಿತರಾಗಿಲ್ಲ. ನಮಗೆ ವಿಶಾಲವಾದ ವ್ಯಾಪ್ತಿ ಇದೆ. ಆದರೆ ಡಾ| ರಾಜೇಶ್ ತಲ್ವಾರ್ ಅವರಂತಹ ಜನರ ಪ್ರತಿಷ್ಠೆಯ ಕುರಿತು ಕಳವಳಗೊಂಡಿದ್ದೇವೆ" ಎಂದು ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.

ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕು, ತನಿಖೆಯ ವೇಳೆ ಆರೋಪಿತನ ಮೇಲೆ ಪೂರ್ವಗ್ರಹ ಮೂಡುವಂತಹ ಯಾವುದನ್ನೂ ಅವರು ಮಾಡಬಾರದು ಎಂದು ಹೇಳಿರುವ ನ್ಯಾಯ ಪೀಠ, ಸಬ್ ಜುಡೀಸ್ ಪ್ರಕರಣಗಳನ್ನು ವರದಿ ಮಾಡುವ ವೇಳೆಗಿನ ನಿರ್ದೇಶನ ತತ್ವಗಳನ್ನು ರೂಪಿಸುವ ಕುರಿತು ಕೇಂದ್ರಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಪತ್ರಿಕಾ ಮಂಡಳಿಗೆ ನೋಟೀಸು ನೀಡಿದೆ.

ನ್ಯಾಯ ಪೀಠವು ಸೂರತ್ ಸಿಂಗ್ ಎಂಬವರು ಅರುಷಿ ಕುಟುಂಬದ ಗೌರವ ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯದ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿತ್ತು. ಜುಲೈ 22 ರಂದು ನೀಡಿದ ಕೊನೆಯ ಆದೇಶದ ಬಳಿಕ ಮಾಧ್ಯಮಗಳು ಅರುಷಿ ಕೊಲೆ ಪ್ರಕರಣದ ವರದಿಗಾರಿಕೆಯಲ್ಲಿ ಸಂಯಮ ವಹಿಸಿವೆ ಎಂದು ವಕೀಲರು ಹೇಳಿದ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರುಷಿ ಕೊಲೆ ಪ್ರಕರಣದಲ್ಲಿ ಆಕೆಯ ತಂದೆ ದಂತವೈದ್ಯ ಡಾ| ರಾಜೇಶ್ ತಲ್ವಾರ್ ಅವರು ಅಮಾಯಾಕರೆಂದು ಘೋಷಿಸಿಸುವ ಮುನ್ನ ಅವರನ್ನು 50 ದಿನಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.
ಮತ್ತಷ್ಟು
ಪ್ರಯೋಗಾರ್ಥ ಪರೀಕ್ಷೆಯಲ್ಲಿ 49 ಮಕ್ಕಳ ಸಾವು
ಜಮ್ಮು ಜೈಲ್‌ಭರೋ: ಸಾವಿರಾರು ಮಂದಿಯ ಬಂಧನ
ಪ್ರತ್ಯೇಕತಾವಾದಿಗಳಿಂದ ವಿಶ್ವಸಂಸ್ಥೆಗೆ ಮನವಿ
ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ
ತಸ್ಲೀಮಾ ವೀಸಾ ಅವಧಿ ವಿಸ್ತರಣೆ