ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಷರಫ್ ರಾಜೀನಾಮೆ: ಎಲ್ಒಸಿಯಲ್ಲಿ ಭದ್ರತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ರಾಜೀನಾಮೆ: ಎಲ್ಒಸಿಯಲ್ಲಿ ಭದ್ರತೆ
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ತನ್ನ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ, ಇಸ್ಲಾಮಾಬಾದಿನ ರಾಜಕೀಯ ಬೆಳವಣಿಗೆಯಿಂದಾಗಿ ಯಾವುದೇ ಸಂಭಾವ್ಯ ಅಹಿತಕರ ಘಟನೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯುದ್ದಕ್ಕೂ ರಕ್ಷಣಾ ಪಡೆಗಳು ಬಿಗಿ ಭದ್ರತೆ ನೀಡಿದ್ದಾರೆ.

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಅತ್ಯಂತ ಜಾಗರೂಕತೆ ವಹಿಸಲಾಗುತ್ತಿದ್ದು, ಎಲ್ಒಸಿಯಲ್ಲಿ ಭದ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ನೆರೆಯ ದೇಶದಲ್ಲಿನ ರಾಜಕೀಯ ಬೆಳವಣಿಗೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು ಅದು ಪಾಕಿಸ್ತಾನದ ಆಂತರಿಕ ವ್ಯವಹಾರ ಎಂದು ಹೇಳಿದ್ದಾರೆ.

ತನ್ನ ಒಂಭತ್ತು ವರ್ಷಗಳ ಅಧಿಕಾರಕ್ಕೆ ಅಂತ್ಯ ಹಾಡಿರುವ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಸೋಮವಾರ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಮತ್ತಷ್ಟು
ಜವಾಬ್ದಾರಿಯಿಂದ ವರ್ತಿಸಲು ಮಾಧ್ಯಮಗಳಿಗೆ ತಾಕೀತು
ಪ್ರಯೋಗಾರ್ಥ ಪರೀಕ್ಷೆಯಲ್ಲಿ 49 ಮಕ್ಕಳ ಸಾವು
ಜಮ್ಮು ಜೈಲ್‌ಭರೋ: ಸಾವಿರಾರು ಮಂದಿಯ ಬಂಧನ
ಪ್ರತ್ಯೇಕತಾವಾದಿಗಳಿಂದ ವಿಶ್ವಸಂಸ್ಥೆಗೆ ಮನವಿ
ಎಸ್ಸೆಂಕೆ, ರಂಗರಾಜನ್ ಪ್ರಮಾಣವಚನ ಸ್ವೀಕಾರ
ಅಮರನಾಥ: ಶಾಂತಿ ಕಾಪಾಡಲು ಪ್ರಧಾನಿ ಮನವಿ