ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಾಕ್‌ನೊಂದಿಗೆ ಜೆಕೆ ವಿಲೀನಕ್ಕೆ ಗಿಲಾನಿ ಒತ್ತಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನೊಂದಿಗೆ ಜೆಕೆ ವಿಲೀನಕ್ಕೆ ಗಿಲಾನಿ ಒತ್ತಾಯ
ಜಮ್ಮು ಮತ್ತು ಕಾಶ್ಮೀರವು ಪಾಕಿಸ್ತಾನದೊಂದಿಗಿನ ವಿಲೀನವಾಗಬೇಕು ಎಂದು ಪ್ರತ್ಯೇಕತವಾದಿ ನಾಯಕ ಸೈಯದ್ ಅಲಿ ಗಿಲಾನಿ ಒತ್ತಾಯಿಸಿದ್ದಾರೆ.

ಶ್ರೀನಗರದ ಪ್ರವಾಸಿ ಕೇಂದ್ರದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರವು ಪಾಕಿಸ್ತಾನದೊಂದಿಗೆ ವಿಲೀನವಾಗುವ ಹೊರತಾಗಿ, ಕಾಶ್ಮೀರ ಸಮಸ್ಯೆಗೆ ಯಾವುದೇ ಪರಿಹಾರ ಇಲ್ಲ ಎಂದು ಪುನರುಚ್ಚರಿಸಿದರು. ಅವರ ಈ ಮಾತಿನಿಂದ ಉತ್ತೇಜಿತರಾದ ಜನತೆ, ನಾವು ಪಾಕಿಸ್ತಾನಿಯರು, ಪಾಕಿಸ್ತಾನ ನಮ್ಮದು ಎಂಬ ಘೋಷಣೆ ಕೂಗಿದರು.

"ನಾವು ಪಾಕಿಸ್ತಾನೀಯರು ಮತ್ತು ಪಾಕಿಸ್ತಾನವು ನಮ್ಮದು. ಯಾಕೆಂದರೆ, ನಾವು ಇಸ್ಲಾಂ ಮೂಲಕ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದ್ದೇವೆ" ಎಂದು ಗಿಲಾನಿ ಹೇಳಿದರು.

ಸುಧಾರಣಾವಾದಿ ಹುರಿಯತ್ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಅವರು, ಕಾಶ್ಮೀರಿ ಪ್ರತ್ಯೇಕತವಾದಿ ಆಂದೋಲನದ ನಾಯಕತ್ವ ವಿವಾದವು ಇಂದು ಬಗೆಹರಿದಿದೆ ಎಂದು ನುಡಿದರು.

"ನನ್ನ ನಾಯಕತ್ವದಲ್ಲಿ ನಂಬಿಕೆಯಿದೆಯೇ? ನನ್ನ ಸಾವಿನವರೆಗೂ ನಿಮ್ಮೊಂದಿಗೆ ವಿಶ್ವಾಸವನ್ನಿರಿಸುತ್ತೇನೆ, ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯುವೆ" ಎಂದು ಇದೇ ಸಂದರ್ಭದಲ್ಲಿ ಗಿಲಾನಿ ಪ್ರಶ್ನಿಸಿದಾಗ, ನೆರೆದಿದ್ದ ಜನತೆ ಚಪ್ಪಾಳೆ ಮೂಲಕ 'ಜರೂರ್' ಅಂದರೆ ಖಂಡಿತ ಎಂಬ ಉತ್ತರ ನೀಡಿತು.
ಮತ್ತಷ್ಟು
ಮಕ್ಕಳ ಸಾವು ತನಿಖೆಗೆ ಏಮ್ಸ್‌ಗೆ ಕೇಂದ್ರ ಕರೆ
ಸಿಮಿಯಿಂದ ಲಿಕ್ವಿಡ್ ಬಾಂಬ್ ಪ್ರಯೋಗ
ಆಗಸ್ಟ್ 25ರೊಳಗೆ ಬಹುಮತ ಸಾಬೀತಿಗೆ ಕೋಡಾಗೆ ಕರೆ
ಮುಷರಫ್ ರಾಜೀನಾಮೆ: ಎಲ್ಒಸಿಯಲ್ಲಿ ಭದ್ರತೆ
ಜವಾಬ್ದಾರಿಯಿಂದ ವರ್ತಿಸಲು ಮಾಧ್ಯಮಗಳಿಗೆ ತಾಕೀತು
ಪ್ರಯೋಗಾರ್ಥ ಪರೀಕ್ಷೆಯಲ್ಲಿ 49 ಮಕ್ಕಳ ಸಾವು