ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಚುನಾವಣಾ ಸ್ಫರ್ಧೆಯ ವಯಸ್ಸು ಮೀರಿದೆ: ನಟವರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣಾ ಸ್ಫರ್ಧೆಯ ವಯಸ್ಸು ಮೀರಿದೆ: ನಟವರ್
PIB
ಮಾಜಿ ವಿದೇಶಾಂಗ ಸಚಿವ ಮತ್ತು ಇತ್ತೀಚೆಗಷ್ಟೇ ಬಿಎಸ್‌ಪಿ ಪಕ್ಷಕ್ಕೆ ಸೇರ್ಪಡೆಗೊಂಡ ನಟವರ್ ಸಿಂಗ್ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದು, ವಯಸ್ಸು 78 ಆಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ವಯಸ್ಸು ಮೀರಿ ಹೋಗಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಆದರೆ, ಮುಂದಿನ ತಿಂಗಳಿನಿಂದ ಮತದಾನ ಪ್ರಾರಂಭಗೊಳ್ಳುವವರೆಗೆ ರಾಜಸ್ಥಾನದ ಎಲ್ಲಾ 33 ಜಿಲ್ಲೆಗಳಲ್ಲಿ ಬಿಎಸ್‌ಪಿ ಪರವಾಗಿ ಚುನಾವಣಾ ಪ್ರಚಾರ ನಡೆಸುತ್ತೇನೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ,

ದೇಶದಾದ್ಯಂತ ಜಡ್ಡುಗಟ್ಟಿರುವ ಕಾಂಗ್ರೆಸ್ ಆಡಳಿತವನ್ನು ದೂಷಿಸಿದ ಸಿಂಗ್, 2004ರಲ್ಲಿ ಕಾಂಗ್ರೆಸ್ 14 ರಾಜ್ಯಗಳನ್ನು ಆಳಿತ್ತು ಆದರೆ, ಈಗ ಕೇವಲ ನಾಲ್ಕು ರಾಜ್ಯಗಳನ್ನು ಆಳುತ್ತಿದೆ. ಇದು ಪಕ್ಷದ ನಾಯಕತ್ವದ ಹಣಬರಹವನ್ನು ಸೂಚಿಸುತ್ತದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಚುನಾವಣೆಯಲ್ಲಿ ಬಿಎಸ್‌ಪಿ ಜೊತೆ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತೇನೆ ಎಂದವರು ನುಡಿದರು.

ಏತನ್ಮಧ್ಯೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಪ್ರಧಾನಮಂತ್ರಿ ಅಭ್ಯರ್ಥಿಯಾಗುವ ಬಗ್ಗೆ ಪ್ರಸ್ತಾಪಿಸಿದ ನಟವರ್ ಸಿಂಗ್, ಮಾಯಾವತಿ ಪ್ರಧಾನಮಂತ್ರಿಯಾಗಲು ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯ ಚುನಾವಣೆಗಳಲ್ಲಿ ಸರಕಾರ ರಚಿಸಲು ಬಿಎಸ್‌ಪಿ ಪ್ರಮುಖ ಪಾತ್ರ ವಹಿಸುವುದರೊಂದಿಗೆ, ಕೇಂದ್ರ ಸರಕಾರದಲ್ಲಿಯೂ ಪ್ರಮುಖ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಿಂಗ್ ಭರವಸೆ ವ್ಯಕ್ತಪಡಿಸಿದರು.

ಮಾಯಾವತಿ ಪಕ್ಷಕ್ಕೆ ಭವಿಷ್ಯವಿದೆ ಮತ್ತು ಯುವ ನಾಯಕತ್ವವು ದೇಶವನ್ನು ಮುನ್ನಡೆಯತ್ತ ಸಾಗಿಸುತ್ತದೆ ಎಂದು ಸಿಂಗ್ ನುಡಿದರು.
ಮತ್ತಷ್ಟು
ಪಾಕ್‌ನೊಂದಿಗೆ ಜೆಕೆ ವಿಲೀನಕ್ಕೆ ಗಿಲಾನಿ ಒತ್ತಾಯ
ಮಕ್ಕಳ ಸಾವು ತನಿಖೆಗೆ ಏಮ್ಸ್‌ಗೆ ಕೇಂದ್ರ ಕರೆ
ಸಿಮಿಯಿಂದ ಲಿಕ್ವಿಡ್ ಬಾಂಬ್ ಪ್ರಯೋಗ
ಆಗಸ್ಟ್ 25ರೊಳಗೆ ಬಹುಮತ ಸಾಬೀತಿಗೆ ಕೋಡಾಗೆ ಕರೆ
ಮುಷರಫ್ ರಾಜೀನಾಮೆ: ಎಲ್ಒಸಿಯಲ್ಲಿ ಭದ್ರತೆ
ಜವಾಬ್ದಾರಿಯಿಂದ ವರ್ತಿಸಲು ಮಾಧ್ಯಮಗಳಿಗೆ ತಾಕೀತು