ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸರಣಿ ಸ್ಫೋಟ: ಹೇವುಡ್ ಭಾರತದಿಂದ ಪರಾರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಣಿ ಸ್ಫೋಟ: ಹೇವುಡ್ ಭಾರತದಿಂದ ಪರಾರಿ
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ತನಿಖೆಗೆ ಬೇಕಾಗಿದ್ದ ಅಮೆರಿಕ ಪ್ರಜೆ ಕೆನ್ ಹೇವುಡ್ ಎಂಬಾತ, ಮುಂಬಯಿ ಪೊಲೀಸರ ಶೋಧನಾ ನೋಟೀಸ್ ನಡುವೆಯೂ, ಆಗಸ್ಟ್ 18ರಂದು ಭಾರತದಿಂದ ಪರಾರಿಯಾಗಿದ್ದಾನೆ.

ಸ್ಫೋಟ ಸಂಭವದ ಕೆಲವೇ ನಿಮಿಷಗಳ ಹಿಂದೆ ಮಾಧ್ಯಮಗಳಿಗೆ ಈತನ ಇಂಟರ್ನೆಟ್ ಸಂಪರ್ಕ ಹೊಂದಿದ್ದ ಕಂಪ್ಯೂಟರ್‌ನಿಂದ ಇಮೇಲ್ ಸಂದೇಶಗಳನ್ನು ರವಾನಿಸಲಾಗಿತ್ತು.

ಸುಳ್ಳು ಪತ್ತೆ ಪರೀಕ್ಷೆ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಟ್ಟಿದ್ದ ಕೆನ್ ಹೇವುಡ್. ಸೋಮವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಅಮೆರಿಕಾಗೆ ಪರಾರಿಯಾಗಿದ್ದಾನೆ.

ಶೋಧನಾ ನೋಟೀಸ್ ನೀಡಿರುವ ಹೊರತಾಗಿಯೂ, ಹೇವುಡ್‌ಗೆ ಅಮೆರಿಕ ತೆರಳಲು ಸಾಧ್ಯವಾಗಿರುವ ಬಗ್ಗೆ ಮುಂಬಯಿ ಪೊಲೀಸರು ತನ್ನ ದೆಹಲಿ ಸಹೋದ್ಯೋಗಿಗಳನ್ನು ದೂರಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಹೇವುಡ್ ಎಲ್ಲಾ ಪರೀಕ್ಷೆಯಲ್ಲೂ ಪಾಸಾಗಿದ್ದರೂ, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತನ್ನಿಂದ ಲಂಚ ಬಯಸಿದ್ದರು ಎಂಬ ಹೇವುಡ್ ಆರೋಪದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸ್ ವಿಭಾಗದ ಭಯೋತ್ಪಾದನಾ ನಿಗ್ರಹ ದಳವು ಹೇವುಡ್‌ಗೆ ಸಮನ್ಸ್ ನೀಡಿತ್ತು.

ಆದರೆ, ಭಯೋತ್ಪಾದನಾ ನಿಗ್ರಹ ದಳದ ಸಮನ್ಸ್‌ಗೆ ಹೇವುಡ್ ಹಾಜರಾಗಿರಲಿಲ್ಲ. ಈ ಗೊಂದಲಕ್ಕೆ ಹೊಣೆ ಯಾರೆಂಬುದು ಸಮಗ್ರ ತನಿಖೆಯಿಂದಷ್ಟೇ ತಿಳಿದುಬರಲಿದೆ ಎಂದು ಮೂಲಗಳು ಹೇಳಿವೆ.

ದೇಶದ ವಾಣಿಜ್ಯ ನಗರದಲ್ಲಿನ ಬಹುರಾಷ್ಟ್ರೀಯ ಕಂಪನಿಯ ಸಿಇಒ ಆಗಿರುವ ಹೇವುಡ್, ಅಹಮದಾಬಾದ್ ಸ್ಫೋಟ ಸಂಭವಿಸುವ ಕೆಲವು ನಿಮಿಷಗಳ ಮೊದಲು ಇಂಡಿಯನ್ ಮುಜಾಹುದ್ದೀನ್ ಮೇಲ್‌ನ ಐಪಿ ವಿಳಾಸದಿಂದ ವಿವಿಧ ಮಾಧ್ಯಮಗಳಿಗೆ ಇ ಮೇಲ್ ಕಳುಹಿಸಿರುವ ಹಿನ್ನೆಲೆಯಲ್ಲಿ ಅನೇಕ ಬಾರಿ ವಿಚಾರಣೆಗೆ ಒಳಗಾಗಿದ್ದ.

ಮುಂಬಯಿಯ ಆತನ ಫ್ಲಾಟ್‌ನ ಡಬ್ಲ್ಯೂಎಫ್ಐಎಫ್ ಸಂಪರ್ಕವನ್ನು ಹೊಂದಿದ್ದು, ತನ್ನ ಸಂಪರ್ಕವು ಪಾಸ್‌ವರ್ಡ್ ರಕ್ಷಣೆಯನ್ನು ಹೊಂದಿರಲಿಲ್ಲ ಮತ್ತು ಇಮೇಲ್ ಕಳುಹಿಸುವ ಸಲುವಾಗಿ ಭಯೋತ್ಪಾದನಾ ಗುಂಪುಗಳು ಅದನ್ನು ಬಳಸುತ್ತಿದ್ದವು ಎಂದು ಹೇವುಡ್ ವಿಚಾರಣೆ ವೇಳೆ ತಿಳಿಸಿದ್ದರು.

ನವಿ ಮುಂಬಯಿಯ ಸಂಪದ ಪ್ರದೇಶದಲ್ಲಿ ವಾಸವಾಗಿದ್ದ ಹೇವುಡ್ ತನ್ನ ಕುಟುಂಬದೊಂದಿಗೆ ಸೋಮವಾರ ಅಮೆರಿಕ ತೆರಳಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೇವುಡ್ ನಿವಾಸದಲ್ಲಿದ್ದ ಮೂರು ಕಂಪ್ಯೂಟರ್‌ಗಳನ್ನು ವಿಶ್ಲೇಷಣೆಗಾಗಿ ಎಫ್ಎಸ್ಎಲ್‌ಗೆ ಕಳುಹಿಸಲಾಗಿದ್ದು, ಇದರ ವರದಿಗಳನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ಸದ್ಯದಲ್ಲೇ ಕಳುಹಿಸುವ ನಿರೀಕ್ಷೆ ಇದೆ.

ಹೇವುಡ್ ಮತ್ತು ಆತನ ಕಂಪ್ಯೂಟರ್ ಮೇಲೆ ನಡೆಸಿದ ಫೋರೆನ್ಸಿಕ್ ಪರೀಕ್ಷೆಯ ಫಲಿತಾಂಶವು ಋಣಾತ್ಮಕವಾಗಿದ್ದ ಕಾರಣ, ಆತನನ್ನು ಬಂಧಿಸಲು ಪೊಲೀಸರಿಗೆ ಯಾವುದೇ ಕಾರಣಗಳಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮಧ್ಯೆ, ಹೇವುಡ್ ಬಂಧನದಲ್ಲಿರದ ಕಾರಣ,ಅಮೆರಿಕಕ್ಕೆ ತೆರಳಲು ಸಾಧ್ಯವಾಗಿದೆ. ತನಿಖೆಯ ವೇಳೆ ಇಲ್ಲಿಯೇ ಇರುವಂತೆ ಆತನಿಗೆ ಸೂಚಿಸಲಾಗಿತ್ತು ಎಂದು ಮುಂಬಯಿ ಪೊಲೀಸ್ ಆಯೋಗಿ ಹಸನ್ ಗಫೂರ್ ತಿಳಿಸಿದ್ದಾರೆ.
ಮತ್ತಷ್ಟು
ರಾಜಾರಾಂ ಮಾಯಾ ಉತ್ತರಾಧಿಕಾರಿ?
ಸಂಪುಟ ಪುನರ್‌ರಚನೆ ಮೇಲೆ ಜಾರ್ಖಂಡ್ ಕರಿನೆರಳು
ಚುನಾವಣಾ ಸ್ಫರ್ಧೆಯ ವಯಸ್ಸು ಮೀರಿದೆ: ನಟವರ್
ಪಾಕ್‌ನೊಂದಿಗೆ ಜೆಕೆ ವಿಲೀನಕ್ಕೆ ಗಿಲಾನಿ ಒತ್ತಾಯ
ಮಕ್ಕಳ ಸಾವು ತನಿಖೆಗೆ ಏಮ್ಸ್‌ಗೆ ಕೇಂದ್ರ ಕರೆ
ಸಿಮಿಯಿಂದ ಲಿಕ್ವಿಡ್ ಬಾಂಬ್ ಪ್ರಯೋಗ