ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಹಮದಾಬಾದ್ ಸ್ಫೋಟ: ತಪ್ಪೊಪ್ಪಿಕೊಂಡ ಬಶೀರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಹಮದಾಬಾದ್ ಸ್ಫೋಟ: ತಪ್ಪೊಪ್ಪಿಕೊಂಡ ಬಶೀರ್
PTI
ಸುಮಾರು 57 ಜನರ ಸಾವಿಗೆ ಕಾರಣವಾದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ನಡೆಸಲು ಉಗ್ರಗಾಮಿಗಳು ವ್ಯಯಿಸಿದ್ದು ಕೇವಲ 75,000 ರೂಪಾಯಿಗಳು ಮಾತ್ರ.

ಎರಡು ದಿನಗಳ ಹಿಂದೆ ಬಂಧಿಸಲಾದ ಸ್ಫೋಟದ ರೂವಾರಿ ಅಬು ಬಶೀರ್‌ನ ವಿಚಾರಣೆಯ ವೇಳೆ ಈತ ಈ ವಿಚಾರವನ್ನು ಬಹಿರಂಗಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತನಿಖೆಯವೇಳೆಗೆ ಯಾವುದೇ ನಿರ್ಲಕ್ಷ್ಯ ಅಥವಾ ಪಶ್ಚಾತಾಪ ವ್ಯಕ್ತಪಡಿಸದ ಆತ ತಾನು ಅಹಮದಾಬಾದಿನಲ್ಲಿ ನಡೆಸಿರುವ ಸರಣಿ ಸ್ಫೋಟದಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾನೆ.

ತುಂಡಾದ ಸೈಕಲ್, ಕಾರು ಮತ್ತು ಪೆಟ್ರೋಲ್‌ನಲ್ಲಿ ಅದ್ದಿರುವ ಅಮೋನಿಯಂ ನೈಟ್ರೇಟ್ ಮತ್ತು ಯೂರಿಯ ಮುಂತಾದ ಸಾಂಪ್ರಾದಾಯಿಕ ವಿಧಾನಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಈ ಸ್ಫೋಟವನ್ನು ನಡೆಸಿರುವುದಾಗಿ ಬಶೀರ್ ತನಿಖಾತಂಡಕ್ಕೆ ಹೇಳಿದ್ದಾನೆಂದು ಮೂಲಗಳು ತಿಳಿಸಿವೆ.

ಇದಲ್ಲದೆ, ಇದಕ್ಕಾಗಿ ಹಣ ಹೊಂದಿಸಲು ಕೆಲವು ತಿಂಗಳುಗಳ ಹಿಂದೆ ಸಿಮಿ ಕಾರ್ಯಕರ್ತನು ಕಚ್‌ನಲ್ಲಿದ್ದ ತನ್ನ ಮನೆಯನ್ನು ಮಾರಾಟ ಮಾಡಿದ್ದನೆಂಬ ವಿಚಾರವನ್ನೂ ಬಶೀರ್ ಬಹಿರಂಗಗೊಳಿಸಿದ್ದಾನೆ.

ಮೂಲಗಳು ಹೇಳಿರುವಂತೆ, ಮಾರಾಟ ಮಾಡಿರುವ ಕಚ್‌ನ ಮನೆಯನ್ನು ವಶಪಡಿಸಿಕೊಳ್ಳಲಾಗಿದ್ದು, ಕ್ರೈಂ ವಿಭಾಗದ ಅಧಿಕಾರಿಗಳು ಈ ಮನೆಯ ನೂತನ ಮಾಲೀಕರನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ.

ಈಗ, ಆ ಮನೆಯನ್ನು ಮಾರಾಟ ಮಾಡಿದ ಸಿಮಿ ಕಾರ್ಯಕರ್ತನನ್ನು ಪತ್ತೆಹಚ್ಚಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಇದರೊಂದಿಗೆ, ಕೇರಳದಲ್ಲಿನ ಉಗ್ರಗಾಮಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದೆನಾದರೂ, ಫಿಟ್ನೆಸ್ ಪರೀಕ್ಷೆಯಲ್ಲಿ ನಪಾಸಾಗಿದ್ದ ಎಂಬುದಾಗಿ ಬಶೀರ್ ತಿಳಿಸಿದ್ದಾನೆನ್ನಲಾಗಿದೆ. ಆದರೆ ಈತನ ವಾಕ್ಚಾತುರ್ಯದಿಂದಾಗಿ ಯುವರಕನ್ನು ಒಲಿಸಿಕೊಳ್ಳಲು ಈತ ಕೇರಳ ಮತ್ತು ಗುಜರಾತಿನ ಹಲೋಲ್‌ಗಳಲ್ಲಿ ಉತ್ತೇಜನ ನೀಡುತ್ತಿದ್ದ.
ಮತ್ತಷ್ಟು
ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸಾಮಾನ್ಯಸ್ಥಿತಿಗೆ
ಸರಣಿ ಸ್ಫೋಟ: ಹೇವುಡ್ ಭಾರತದಿಂದ ಪರಾರಿ
ರಾಜಾರಾಂ ಮಾಯಾ ಉತ್ತರಾಧಿಕಾರಿ?
ಸಂಪುಟ ಪುನರ್‌ರಚನೆ ಮೇಲೆ ಜಾರ್ಖಂಡ್ ಕರಿನೆರಳು
ಚುನಾವಣಾ ಸ್ಫರ್ಧೆಯ ವಯಸ್ಸು ಮೀರಿದೆ: ನಟವರ್
ಪಾಕ್‌ನೊಂದಿಗೆ ಜೆಕೆ ವಿಲೀನಕ್ಕೆ ಗಿಲಾನಿ ಒತ್ತಾಯ