ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪಿತ ರಾಜೀವ್‌ರ ಸ್ಮರಿಸಿದ ಸುತ ರಾಹುಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಿತ ರಾಜೀವ್‌ರ ಸ್ಮರಿಸಿದ ಸುತ ರಾಹುಲ್
PTI
ನೀವ್ಯಾಕೆ ರಾಜಕೀಯ ಬಿಡಬಾರದು?- ಹೀಗಂತ ಒಮ್ಮೆ ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿಯನ್ನು ಪ್ರಶ್ನಿಸಿದ್ದರಂತೆ. ತಾನು ಈ ರಾಷ್ಟ್ರದ ಜನತೆಯನ್ನು ನಂಬಿರುವ ಕಾರಣ ಹಾಗೆ ಮಾಡಲಾರೆ ಎಂಬುದಾಗಿ ರಾಜೀವ್ ತನ್ನ ಪುತ್ರನಿಗೆ ಉತ್ತರಿಸಿದ್ದರು.

ಈ ಘಟನೆಯನ್ನು ನೆನಪಿಸಿಕೊಂಡ ತರುಣ ರಾಜಕಾರಣಿ ರಾಹುಲ್ ಗಾಂಧಿ, ತನ್ನ ತಂದೆ ರಾಜಕೀಯ ಬಿಡದೇ ಇದ್ದುದೇ ಚೆನ್ನಾಗಾಯಿತು, ಇಲ್ಲವಾದರೆ ರಾಷ್ಟ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ರಮಗಳು ಆರಂಭವೇ ಆಗುತ್ತಿರಲಿಲ್ಲ ಎಂದು ನುಡಿದರು.

ರಾಜೀವ್ ಗಾಂಧಿ ಕುರಿತು ಬರೆಯಲಾಗಿದ್ದ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ್ದ ರಾಹುಲ್ ತನ್ನ ತಂದೆಯ ಕುರಿತು ಭಾವುಕರಾಗಿ ಮಾತನಾಡಿದರು. ಬಿಡುಗೆಡೆಯಾದ ಪುಸ್ತಕಗಳಲ್ಲಿ ಒಂದರ ಲೇಖಕ ಮಣಿಶಂಕರ್ ಅಯ್ಯರ್.

ಅಯ್ಯರ್ ಅವರ 'ರಾಜೀವ್ ಕಿ ಸ್ಮೃತಿ' (ರಾಜೀವ್ ನೆನಪುಗಳು) ಯನ್ನು ರಾಹುಲ್ ಗಾಂಧಿ ಬಿಡುಗಡೆ ಮಾಡಿದರು. ಅಮೇಠಿಯ ಕಾಂಗ್ರೆಸ್ ಕಾರ್ಯಕರ್ತ ಜಗದೀಶ್ ಪಿಯುಶ್ ಅವರು ಬರೆದ 'ರಾಜೀವ್ ಗಾಂಧಿ: ಟಕ್ನಿಕಿ ವಿಕಾಸ್ ಔರ್ ಭಾರತ್ ಉನ್ನಾಯನ್' ಪುಸ್ತಕವನ್ನು ಅಯ್ಯರ್ ಬಿಡುಗಡೆ ಮಾಡಿದರು.

"ಇದೀಗ ನಾನು ಕಳೆದ ನಾಲ್ಕು ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇದೀಗ ನನ್ನ ತಂದೆ ಜಾರಿಗೆ ತಂದಿರುವ ಕಾರ್ಯಕ್ರಮಗಳನ್ನು ನೋಡಿದಾಗ, ಭಾರತದ ಜನತೆಯ ಮೇಲೆ ಮೂಲಭೂತವಾಗಿ ವಿಶ್ವಾಸವನ್ನು ಹೊಂದದೇ ಇದ್ದ ಯಾರೇ ಆದರೂ ಈ ಕಾರ್ಯಕ್ರಮಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿರುತ್ತಿರಲಿಲ್ಲ" ಎಂದು ರಾಹುಲ್ ನುಡಿದರು.

ಪಂಚಾಯತ್ ರಾಜ್ ಯೋಜನೆಯನ್ನು ಉದಾಹರಿಸಿದ ಅವರು, ಇದರಿಂದಾಗಿ ನಾವಿಂದು ಮಿಲಿಯಗಟ್ಟಲೆ ಪ್ರತಿನಿಧಿಗಳನ್ನು ಹೊಂದಿದ್ದೇವೆ. ಇದು ನೀವು ಮಿಲಿಯಗಟ್ಟಲೆ ಮಂದಿಯನ್ನು ನಂಬಲು ಸಿದ್ಧರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ ಎಂದು ರಾಹುಲ್ ತನ್ನ ತಂದೆಯ ದೂರದೃಷ್ಟಿಯನ್ನು ಕೊಂಡಾಡಿದರು.

ರಾಜೀವ್ ಜಯಂತಿ
ರಾಷ್ಟ್ರವು ರಾಜೀವ್ ಗಾಂಧಿ ಅವರ 64ನೆ ಜನ್ಮದಿನವನ್ನು ಆಚರಿಸುತ್ತಿದೆ. ರಾಷ್ಟ್ರದ ಅಭಿವೃದ್ಧಿಯ ಕುರಿತು ವಿಭಿನ್ನ ದೃಷ್ಟಿಕೋನ ಹೊಂದಿದ್ದ ರಾಜೀವ್ ಗಾಂಧಿ ಚುನಾವಣಾ ಪ್ರಚಾರ ಭಾಷಣದ ವೇಳೆಗೆ ತಮಿಳ್ನಾಡಿನ ಶ್ರೀ ಪೆರಂಬದೂರ್ ಎಂಬಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಈಡಾಗಿ 1991ರ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು.

ರಾಷ್ಟ್ರಾಧ್ಯಕ್ಷೆ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಗೂ ಇತರ ಕಾಂಗ್ರೆಸ್ ನಾಯಕರು ರಾಜೀವ್ ಸಮಾಧಿಯಲ್ಲಿ ಪುಷ್ಪಾಂಜಲಿ ಅರ್ಪಿಸಿದರು.

ಸೋನಿಯಾ ಗಾಂಧಿ ತನ್ನ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕ, ಅಳಿಯ ರಾಬರ್ಟ್ ವಾದ್ರಾ ಹಾಗೂ ಮೊಮ್ಮಕ್ಕಳೊಂದಿಗೆ ವೀರ ಭೂಮಿಗೆ ತೆರಳಿ ಗೌರವ ಸಲ್ಲಿಸಿದರು. ರಾಜೀವ್ ಅವರ ಗೌರವಾರ್ಥ ಇಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮತ್ತಷ್ಟು
ಸಿಂಗೂರ್ ಪ್ರತಿಭಟನೆ ಮುಂದೂಡಿಕೆಗೆ ಎಡರಂಗ ಮನವಿ
ಅಹಮದಾಬಾದ್ ಸ್ಫೋಟ: ತಪ್ಪೊಪ್ಪಿಕೊಂಡ ಬಶೀರ್
ಕಾಶ್ಮೀರ ಕಣಿವೆಯಲ್ಲಿ ಜನಜೀವನ ಸಾಮಾನ್ಯಸ್ಥಿತಿಗೆ
ಸರಣಿ ಸ್ಫೋಟ: ಹೇವುಡ್ ಭಾರತದಿಂದ ಪರಾರಿ
ರಾಜಾರಾಂ ಮಾಯಾ ಉತ್ತರಾಧಿಕಾರಿ?
ಸಂಪುಟ ಪುನರ್‌ರಚನೆ ಮೇಲೆ ಜಾರ್ಖಂಡ್ ಕರಿನೆರಳು