ಪ್ರತ್ಯೇಕತಾವಾದಿಗಳು ಬೃಹತ್ ರ‌್ಯಾಲಿಯನ್ನು ನಡೆಸಿ, ವಿಶ್ವಸಂಸ್ಥೆ ಕಚೇರಿಗೆ ದೂರು ಸಲ್ಲಿಸಿದ ಎರಡು ದಿನಗಳ ನಂತರ, ರಾಷ್ಟ್ರೀಯ ರಕ್ಷಣಾ ಸಲಹಾಗಾರ ಎಂ.ಕೆ.ನಾರಾಯಣನ್ ಕಾಶ್ಮೀರ ಕಣಿವೆಗೆ ಬುಧವಾರ ಭೇಟಿ ನೀಡಲಿದ್ದಾರೆ.
ಅಮರನಾಥ್ ಭೂ ವಿವಾದದ ನಂತರ, ಕಣಿವೆಯಲ್ಲಿನ ಪ್ರಸಕ್ತ ಭದ್ರತಾ ಪರಿಸ್ಥಿತಿಯ ಬಗ್ಗೆ ಪೊಲೀಸ್ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳೊಂದಿಗೆ ನಾರಾಯಣನ್ ಮಾತುಕತೆ ನಡೆಸಲಿದ್ದಾರೆ.
ಗುಪ್ತಚರ ವಿಭಾಗದ ನಿರ್ದೇಶಕ ಪಿ.ಸಿ. ಹಲ್ಡರ್ ಮತ್ತು ಕೇಂದ್ರ ಸಚಿವಾಲಯದ ಇತರ ಅಧಿಕಾರಿಗಳು ಇವರೊಂದಿಗೆ ಜೊತೆಗೂಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರತ್ಯೇಕತಾವಾದಿಗಳಿಂದ ಶುಕ್ರವಾರ ನಡೆಯಲಿರುವ ಪ್ರಸ್ತಾಪಿತ ಈದ್ಗಾ ಜಾಥಾ ಕುರಿತಾಗಿಯೂ ಸಭೆಯ ವೇಳೆ ಚರ್ಚೆ ನಡೆಸಲಿದ್ದಾರೆ.
ಸಾವಿರಾರು ಕಾಶ್ಮೀರಿ ಜನರು ವಿಶ್ವಸಂಸ್ಥೆ ಕಚೇರಿಗೆ ಆಗಮಿಸಿ ಅಂತಾರಾಷ್ಟ್ರೀಯ ಮಂಡಳಿಯು ಕಾಶ್ಮೀರ ವಿವಾದದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ ಎರಡು ದಿನಗಳ ನಂತರ ನಾರಾಯಣನ್ ಈ ಭೇಟಿಯನ್ನು ನಿಗದಿಪಡಿಸಿದ್ದಾರೆ.
|