ಔಷಧ ಪ್ರಯೋಗ ಪರೀಕ್ಷೆಯ ವೇಳೆ ಏಮ್ಸ್ ಆಸ್ಪತ್ರೆಯಲ್ಲಿ ಉಂಟಾದ 49 ಮಕ್ಕಳ ಸಾವಿನ ಕುರಿತಾಗಿ ತನಿಖೆ ನಡೆಸಲು, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ವಿಶೇಷ ಸಮಿತಿಯೊಂದನ್ನು ನೇಮಿಸಿದೆ
ನರಶಾಸ್ತ್ರ ವಿಭಾಗದ ಮುಖ್ಯಸ್ಥೆ ಮಾಧುರಿ ಬಿಹಾರಿ ಅವರ ನೇತೃತ್ವದ ಐದು ಮಂದಿ ಸದಸ್ಯರನ್ನೊಳಗೊಂಡ ಸಮಿತಿಯು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಡಳಿತ ಮಂಡಳಿಯ ಸಭೆಯಲ್ಲಿ ಈ ವಿಚಾರವು ಪ್ರಸ್ತಾಪಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಸಾವಿನ ಕುರಿತಾಗಿ ತನಿಖೆ ನಡೆಸುವಂತೆ ಏಮ್ಸ್ ನಿರ್ದೇಶಕರಿಗೆ ಸೂಚನೆ ನೀಡಿದ ನಂತರ, ಈ ಸಮಿತಿಯನ್ನು ರಚಿಸಲಾಗಿದೆ.
ಕಳೆದ ಎರಡುವರೆ ವರ್ಷಗಳಲ್ಲಿ ನೂತನ ಔಷಧಿಗಳ ಪರೀಕ್ಷೆಯ ವೇಳೆ ಸುಮಾರು 49 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಏಮ್ಸ್ ಆಡಳಿತವು ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರಿಸುವ ವೇಳೆ ತಿಳಿಸಿತ್ತು.
ಅದಾಗ್ಯೂ, ಈ ಎಲ್ಲಾ 49 ಮಕ್ಕಳೂ ಅನಾರೋಗ್ಯದಿಂದ ಮತ್ತು ನೈಸರ್ಗಿಕವಾಗಿ ಸಾವನ್ನಪ್ಪಿದ್ದು, ಔಷಧ ಪ್ರಯೋಗಗಳಿಂದಲ್ಲ ಎಂದು ಏಮ್ಸ್ ಆಡಳಿತವು ಸಮರ್ಥಿಸಿಕೊಂಡಿದೆ.
|