ಸಿಮಿ ನಿಷೇಧ ತೆರವು ಮೇಲಿನ ತಡೆಯಾಜ್ಞೆಯನ್ನು ಮುಂದುವರಿಸಬೇಕು ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟನ್ನು ಮಂಗಳವಾರ ಒತ್ತಾಯಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 22ರಂದು ನಿಗದಿಪಡಿಸಲಾಗಿದ್ದರೂ, ಅದು ಕಾಸ್‌ಲಿಸ್ಟ್(ನಿರ್ದಿಷ್ಟ ದಿನದಂದು ವಿಚಾರಣೆಗಿರುವ ಪ್ರಕರಣಗಳ ವಿವರಣೆ ಇರುವ ಪಟ್ಟಿ)ಯಲ್ಲಿ ಸೇರಿಸಲಾಗಿಲ್ಲ ಎಂದು ನ್ಯಾಯಮೂರ್ತಿ ಬಿ.ಎನ್.ಅಗರ್‌ವಾಲ್, ಜಿ.ಎಸ್ ಸಿಂಘ್ವಿ ಮತ್ತು ಜೆ.ಎಂ.ಪಾಂಚಾಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರಿಕೆ ಮಾಡಿಕೊಂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ, ನಿಷೇಧ ತೆರವು ತಡೆಯಾಜ್ಞೆ ಮುಂದುವರಿಸಲು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಈ ವಿಚಾರವು ಅತ್ಯಂತ ಪ್ರಮುಖವಾದುದಾಗಿದ್ದು, ತಡೆಯಾಜ್ಞೆ ಮುಂದುವರಿಸದೇ ಇದ್ದರೆ ಇದು ರಾಷ್ಟ್ರದ ಹಿತಾಸಕ್ತಿಗೆ ಮಾರಕವಾಗಲಿದೆ ಎಂದು ಸುಬ್ರಮಣಿಯಂ ವಾದಿಸಿದ್ದಾರೆ.
|