ಭಾರತೀಯ ವಾಯು ಪಡೆ(ಐಎಎಫ್) 400 ಪೈಲಟ್‌ಗಳ ಕೊರತೆಯನ್ನು ಎದುರಿಸುತ್ತಿದ್ದು, ಈ ಕೊರತೆ ಸರಿದೂಗಿಸಲು ಐದು ವರ್ಷಗಳ ಅವಧಿ ಬೇಕಾಗಬಹುದು ಎಂದು ವಾಯು ಪಡೆ ಮುಖ್ಯಸ್ಥ ಮಾರ್ಶಲ್ ಪಾಲಿ ಹೋಮಿ ಮೇಜರ್ ತಿಳಿಸಿದ್ದಾರೆ.
ಐಎಎಫ್ ಪೈಲಟ್‌ಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಪೈಲಟ್‍ಗಳ ಕಾರ್ಯನಿರ್ವಹಣೆ ತರಬೇತಿ ಅವಧಿಯು ಆರರಿಂದ ಎಂಟು ವರ್ಷಗಳಾಗಿವೆ.
ಆರರಿಂದ ಎಂಟು ವರ್ಷಗಳ ಕಾಲ ತರಬೇತಿ ಪಡೆಯುವ ಅಗತ್ಯವಿದ್ದು, ಈ ಅವಧಿ ಕಡಿತಗೊಳಿಸಲು ಸಾಧ್ಯವಿಲ್ಲ. ಪ್ರಸಕ್ತ 400 ಪೈಲಟ್‌ಗಳ ಕೊರತೆಯನ್ನು ವಾಯುಪಡೆಯು ಎದುರಿಸುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಇದನ್ನು ಸರಿದೂಗಿಸಬಹುದು ಎಂದು ಪ್ರಮುಖ ವಾಯು ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಐಎಎಫ್ ಎರಡು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲದೆ, 'ಉಳಿಸುವುದು' ಮತ್ತು 'ಆಕರ್ಷಿಸುವುದು' ಈ ಎರಡು ವಿಷಯಗಳಿಗೆ ಒತ್ತು ನೀಡುವುದರೊಂದಿಗೆ, ಅತ್ಯುತ್ತಮ ಉದ್ಯೋಗಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಚಾರಾಂದೋಲನವನ್ನು ನಡೆಸುತ್ತಿದ್ದೇವೆ ಎಂದು ಮೇಜರ್ ತಿಳಿಸಿದ್ದಾರೆ.
ಖಾಸಗಿ ಕ್ಷೇತ್ರದ ವೇತನಕ್ಕೆ ನಮ್ಮ ವೇತನವು ಸಮಾನವಲ್ಲದಿದ್ದರೂ, ಸ್ಪರ್ಧಾತ್ಮಕ ಮತ್ತು ಗುಣಮಟ್ಟ ವೃದ್ಧಿಯತ್ತ ಹೆಚ್ಚು ಒತ್ತು ನೀಡುತ್ತೇವೆ ಎಂದು ಮೇಜರ್ ಸ್ಪಷ್ಟಪಡಿಸಿದ್ದಾರೆ.
|