ಮುಂಬಯಿ ಪೊಲೀಸರ ಶೋಧನಾ ನೋಟೀಸ್ ನಡುವೆಯೂ ಕೆನೆತ್ ಹೇವುಡ್ ಅಮೆರಿಕಕ್ಕೆ ಪರಾರಿಯಾಗಲು ವಲಸೆ ಅಧಿಕಾರಿಗಳ ಅಜಾಗರೂಕತೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುವ ಹಿನ್ನೆಲೆಯಲ್ಲಿ, ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಯೊಬ್ಬರನ್ನು ವಜಾ ಮಾಡಲಾಗಿದೆ.
ಈ ಪ್ರಕರಣದಲ್ಲಿ ಪ್ರಮುಖ ಭದ್ರತಾ ಅಚಾತುರ್ಯ ಉಂಟಾಗಿದ್ದು, ಇದು ಶೋಧನಾ ನೋಟೀಸ್ ಧಿಕ್ಕರಿಸಿ ಹೇವುಡ್‌ಗೆ ಅಮೆರಿಕಕ್ಕೆ ತೆರಳಲು ಸುಲಭವಾಗುವಂತೆ ಮಾಡಿದೆ ಎಂದು ವಲಸೆ ಬ್ಯೂರೋ(ಬಿಒಐ)ಮಾಡಿರುವ ತನಿಖೆಯು ದೃಢಪಡಿಸಿದೆ.
ಅನುಮತಿಯಿಲ್ಲದೆ ಹೇವುಡ್‌ನನ್ನು ಭಾರತದಿಂದ ಹೊರಹೋಗಲು ಬಿಡದಂತೆ ಅಮೆರಿಕವೂ ಭಯೋತ್ಪಾದನ ನಿಗ್ರಹ ಗುಂಪಿಗೆ ಎಚ್ಚರಿಕೆ ನೀಡಿತ್ತು.
ಕೆನೆತ್ ಹೇವುಡ್ ಅವರ ಸುಲಭ ರೀತಿಯ ಪರಾರಿಯು ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಜುಲೈ 26ರಂದು ಸಂಭವಿಸಿದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ನಿಮಿಷಗಳ ಮೊದಲು ಮಾಧ್ಯಮಗಳಿಗೆ ಹೇವುಡ್ ಕಂಪ್ಯೂಟರ್ ಇಂಟರ್ನೆಟ್ ಐಪಿ ಮೂಲಕ ಇಮೇಲ್ ಕಳುಹಿಸಲಾಗಿದ್ದರಿಂದ, ಹೇವುಡ್ ವಿಚಾರಣೆಗೊಳಪಟ್ಟಿದ್ದರು.
ಏತನ್ಮಧ್ಯೆ, ಈ ಸಂಪೂರ್ಣ ಪ್ರಕರಣದಲ್ಲಿ ವಿಫಲತೆಯ ಬಗ್ಗೆ ಮತ್ತು ಇದಕ್ಕೆ ಕಾರಣರಾದವರ ಬಗ್ಗೆ ಸೂಕ್ತ ರೀತಿಯ ತನಿಖೆ ನಡೆಸಲು ಗೃಹ ಸಚಿವಾಲಯವು ಆದೇಶ ನೀಡಿದೆ.
|