ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಕಳೆದ ರಾತ್ರಿ ಜಮ್ಮುವಿನಲ್ಲಿ ಉಂಟಾದ ಘರ್ಷಣೆಯಿಂದಾಗಿ ಒಂಬತ್ತು ಪೊಲೀಸರು ಸೇರಿದಂತೆ ಸುಮಾರು 40 ಮಂದಿ ಗಾಯಗೊಂಡಿದ್ದು, ಈ ನಿಟ್ಟಿನಲ್ಲಿ, ಜಮ್ಮುವಿನಾದ್ಯಂತ ಬುಧವಾರ ಕರ್ಫ್ಯೂ ವಿಧಿಸಲಾಗಿದ್ದು, ಸೇನೆಯನ್ನು ನಿಯೋಜಿಸಲಾಗಿದೆ.

ಆದರೆ, ಸಾಂಬಾ, ಉದಾಂಪುರ್ ಮತ್ತು ಕಿಸ್ತಾವರ್ ಜಿಲ್ಲೆಗಳಲ್ಲಿ ಕರ್ಫ್ಯೂವನ್ನು ಸಡಿಲಿಸಲಾಗಿದೆ.

ನಗರದ ವಿವಿಧ ಭಾಗಗಳಲ್ಲಿ ಮರು ಹಿಂಸಾಚಾರ ಪ್ರಾರಂಭಗೊಂಡಿದ್ದು, ಕಲ್ಲು ತೂರಾಟ ನಡೆಸಲಾಗಿದೆ ಮತ್ತು ಪೊಲೀಸ್ ಹಾಗೂ ಆರ್ಎಎಫ್ ಪಡೆಗಳೊಂದಿಗೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಆರ್ಎಎಫ್ ದುಷ್ಕರ್ಮಿಗಳ ಮೇಲೆ ಲಾಠೀಚಾರ್ಜ್, ಆಶ್ರುವಾಯು ನಡೆಸಿದ್ದಾರೆ.

ಈ ನಡುವೆ, 100 ಎಕರೆ ಜಮೀನನ್ನು ಅಮರನಾಥ ಪವಿತ್ರ ದೇವಾಲಯಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿ ಅಮರನಾಥ ಸಂಘರ್ಷ ಸಮಿತಿಯು ಕರೆ ನೀಡಿದ್ದ ಮೂರು ದಿನಗಳ ಜೈಲ್ ಭರೋ ಆಂದೋಲನ ಇಂದು ಕೊನೆಗೊಳ್ಳಲಿದೆ.

ಕರ್ಫ್ಯೂ ಧಿಕ್ಕರಿಸಿ ಪ್ರತಿಭಟನೆ ನಡೆಸುವುದನ್ನು ತಡೆಯುವ ನಿಟ್ಟಿನಲ್ಲಿ, ನಗರದ ವಿವಿಧ ಭಾಗಗಳಲ್ಲಿ ತಂತಿ ಬೇಲಿಗಳನ್ನು ಸೇನಾಪಡೆಯು ಹಾಕಿತ್ತು.

ಏತನ್ಮಧ್ಯೆ, ಅಮರನಾಥ್ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ರಾಜ್ಯಪಾಲರಿಂದ ರಚಿತಗೊಂಡ ಸಮಿತಿಯೊಂದಿಗೆ ಮಾತುಕತೆ ನಡೆಸಲು ಜಮ್ಮುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಮರನಾಥ್ ಸಂಘರ್ಷ ಸಮಿತಿಯು ಒಪ್ಪಿಕೊಂಡಿದೆ ಎಂದು ಅಮರನಾಥ್ ಸಂಘರ್ಷ ಸಮಿತಿಯ ವಕ್ತಾರ ಡಾ.ನಾಗೇಂದ್ರ ಸಿಂಗ್ ತಿಳಿಸಿದ್ದಾರೆ.
ಮತ್ತಷ್ಟು
ಹೇವುಡ್ ಪರಾರಿ: ಅಧಿಕಾರಿಯ ವಜಾ
ಐಎಎಫ್‌ನಲ್ಲಿ 400 ಪೈಲೆಟ್‌ಗಳ ಕೊರತೆ
ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ
ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು
ಸಿಮಿ ನಿಷೇಧ ತೆರವು ಮೇಲಿನ ತಡೆ ವಿಸ್ತರಣೆಗೆ ಆಗ್ರಹ
ಏಮ್ಸ್ ಮಕ್ಕಳ ಸಾವು: ತನಿಖೆಗೆ ವಿಶೇಷ ಸಮಿತಿ