ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಅಮರನಾಥ ಭೂ ವಿವಾದದಿಂದಾಗಿ ಜಮ್ಮು ಕಾಶ್ಮೀರದಲ್ಲಿ ಉಂಟಾಗಿರುವ ವಿಭಜನೆಯನ್ನು ಪ್ರಸ್ತಾಪಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ವಿಭಜಕ ಶಕ್ತಿಗಳು ಈ ದಿಸೆಯಲ್ಲಿ ಕಾರ್ಯವೆಸಗುತ್ತಿದ್ದು, ರಾಷ್ಟ್ರದ ಸೌಹಾರ್ದ ಸಂಪ್ರದಾಯವು ಗಂಭೀರ ಸವಾಲನ್ನೆದುರಿಸುತ್ತಿದೆ ಎಂದು ಹೇಳಿದ್ದಾರೆ.

PTI
ಸೌಹಾರ್ದ ಸಂಸ್ಕೃತಿಯು ಭಾರತೀಯ ನಾಗರೀಕತೆಯ ತಳಹದಿ ಎಂದು ನುಡಿದ ಪ್ರಧಾನಿ, "ಸದ್ಭಾವನೆಯ ಈ ಸಂಪ್ರದಾಯವು ಅತಿದೊಡ್ಡ ಸವಾಲನ್ನು ಎದುರಿಸುತ್ತಿದೆ ಎಂದು ಖೇದವ್ಯಕ್ತಪಡಿಸಿದ್ದಾರೆ. ಭಾರತದ ಮ‌ೂಲತತ್ವಕ್ಕೇ ಕೊಡಲಿ ಏಟು ಹಾಕಲು ವಿಭಜಕ ಶಕ್ತಿಗಳು ಕಾರ್ಯವೆಸಗುತ್ತಿವೆ ಎಂದು ಅವರು ನುಡಿದರು. ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಇತರ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದ ಸಮಾರಂಭ ಒಂದರಲ್ಲಿ, ಸಾಮಾಜಿಕ ಕಾರ್ಯಕರ್ತ ಎನ್ ರಾಧಾಕೃಷ್ಣನ್ ಅವರಿಗೆ ಪ್ರಶಸ್ತಿ ನೀಡಿದ ಬಳಿಕ ಮಾತನಾಡುತ್ತಿದ್ದರು.

ಅವರು ನೇರವಾಗಿ ಯಾವುದೇ ಪ್ರಸ್ತಾಪ ಮಾಡದಿದ್ದರು ಅವರ ಮಾತುಗಳಲ್ಲಿ ಅಮರನಾಥ ಭೂ ವಿವಾದವು ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯದಲ್ಲಿ ಉಂಟು ಮಾಡಿರುವ ವಿಭಜನೆಯನ್ನು ಎತ್ತಿ ತೋರುತ್ತಿತ್ತು.

ಅಮರನಾಥ ಬಿಕ್ಕಟ್ಟಿನ ಬಗ್ಗೆ ವಿಭಜಕ ರಾಜಕೀಯದ ಕುರಿತು ಪ್ರಸ್ತಾಪಿಸಿದ ಐದು ದಿನಗಳ ಬಳಿಕ ಪ್ರಧಾನಿ ಈ ಅಭಿಪ್ರಾಯ ಹೊರಹೊಮ್ಮಿಸಿದ್ದಾರೆ. ಅವರು ಕೆಂಪು ಕೋಟೆಯಿಂದ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ವೇಳೆ ವಿಭಜಕ ರಾಜಕೀಯದ ಕುರಿತು ಎಚ್ಚರಿಕೆ ನೀಡಿದ್ದರು.

ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಧೋರಣೆಯಾಗಿದ್ದ ಮಾತುಕತೆ ಮತ್ತು ಸೌಹಾರ್ದವನ್ನು ಎತ್ತಿಹಿಡಿದ ಮನಮೋಹನ್ ಸಿಂಗ್ ಅವರು "ಬಿಕ್ಕಟ್ಟುಗಳು ಮೊದಲು ಮಾನವರ ಮನಸ್ಸಿನಲ್ಲಿ ಕೊನೆಯಾಗಬೇಕು ಮತ್ತು ಅಲ್ಲಿ ಸದ್ಭಾವನೆ ಮೂಡಬೇಕು" ಎಂದು ಮಾರ್ಮಿಕವಾಗಿ ನುಡಿದರು.
ಮತ್ತಷ್ಟು
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಹೇವುಡ್ ಪರಾರಿ: ಅಧಿಕಾರಿಯ ವಜಾ
ಐಎಎಫ್‌ನಲ್ಲಿ 400 ಪೈಲೆಟ್‌ಗಳ ಕೊರತೆ
ಕಾಶ್ಮೀರಕ್ಕೆ ಸ್ವಾತಂತ್ರ್ಯ: ಅರುಂಧತಿ ಹೇಳಿಕೆ ಎಬ್ಬಿಸಿದ ವಿವಾದ
ರಾಷ್ಟ್ರಪತಿ ಆಡಳಿತವೇ ಪರ್ಯಾಯ: ಲಾಲು
ಸಿಮಿ ನಿಷೇಧ ತೆರವು ಮೇಲಿನ ತಡೆ ವಿಸ್ತರಣೆಗೆ ಆಗ್ರಹ