ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ: ಜಮ್ಮುವಿನಲ್ಲಿ ಕರ್ಫ್ಯೂ ಸಡಿಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ: ಜಮ್ಮುವಿನಲ್ಲಿ ಕರ್ಫ್ಯೂ ಸಡಿಲಿಕೆ
ಜಮ್ಮುವಿನಲ್ಲಿ ನಿನ್ನೆ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂವನ್ನು ಇಂದು ಪರಿಸ್ಥಿತಿ ಕೊಂಚ ಶಾಂತಗೊಂಡಿದ್ದರಿಂದ ಬೆಳಿಗ್ಗಿನ ಜಾವ ಐದರಿಂದ ಸಡಿಲಗೊಳಿಸಲಾಗಿದೆ. ಬುಧವಾರ ಪ್ರತಿಭಟನಾಕಾರರು ಘರ್ಷಣೆಗಿಳಿದಿದ್ದು, ಕೆಲವು ವಾಹನ ಮತ್ತು ಪೋಲೀಸ್ ನೆಲೆಗಳ ಮೇಲೆ ದಾಳಿ ನಡೆಸಿದ್ದರು.

"ಪ್ರತಿಭಟನಾಕಾರರು ಮಕ್ಕಳನ್ನು ಬೀದಿಗೆಳೆದು ತರುವರೆಂದು ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ತರಲು ಕರ್ಫ್ಯೂ ಹೇರುವುದು ಅನಿವಾರ್ಯವಾಗಿತ್ತು" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹಾಗಿದ್ದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೂ ಸೇರಿದಂತೆ ಸಾಮಾನ್ಯ ಜನರು ಕರ್ಫ್ಯೂನ ಹೊರತಾಗಿಯೂ ಬೀದಿಗಿಳಿದಿದ್ದರು.

ಪೋಲೀಸರು ಹಾಗೂ ಅರೆಸೇನಾಪಡೆಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರದಂದು ಶ್ರೀನಗರದ ಸ್ಥಿತಿಗತಿಗಳನ್ನು ಅವಲೋಕಿಸಿದ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರು ಜಮ್ಮು ವಲಯದ ಕಾನೂನು ಸುವ್ಯವಸ್ಥೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಜಮ್ಮುವಿನಲ್ಲಿ ಕಳೆದ ಎರಡು ತಿಂಗಳಿನಿಂದೀಚೆಗೆ ನಿರಂತರ ಗಲಭೆ ನಡೆಯುತ್ತಿದ್ದು ಇದುವರೆಗೆ 12 ಜನರು ಮೃತರಾಗಿದ್ದಾರೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ. ಇದಲ್ಲದೆ ಗಲಭೆಯು ಸಾರ್ವಜನಿಕ ಆಸ್ತಿಪಾಸ್ತಿಯ ನಾಶಕ್ಕೆ ಕಾರಣವಾಗಿದೆ.

ಕಾಶ್ಮೀರದಲ್ಲಿ 40 ಹೆಕ್ಟೇರ್ ಪ್ರದೇಶವನ್ನು ಶ್ರೀ ಅಮರನಾಥ ಬೋರ್ಡ್‌ಗೆ ನೀಡಲು ತೀರ್ಮಾನಿಸಿದ್ದ ಸರಕಾರದ ನಿರ್ಧಾರದ ವಿರುದ್ಧ ಮುಸ್ಲಿಂ ಬಾಹುಳ್ಯದ ಕಾಶ್ಮೀರ ಕಣಿವೆಯಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ನಿರ್ಧಾರವನ್ನು ಹಿಂತೆಗೆದುಕೊಂಡ ಸರಕಾರದ ತೀರ್ಮಾನವನ್ನು ವಿರೋಧಿಸಿ ಇಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸರಕಾರವು ಜುಲೈ ಒಂದರಂದು ಕೈಗೊಂಡ ಈ ವಾಪಾಸಾತಿ ನಿರ್ಧಾರವು ಹಿಂದೂ ಬಾಹುಳ್ಯದ ಜಮ್ಮು ಪ್ರಾಂತ್ಯದಲ್ಲಿ ಪ್ರತಿಭಟನೆಗೆ ನಾಂದಿ ಹಾಡಿತ್ತು.

ಶ್ರೀ ಅಮರನಾಥ ಸಂಘರ್ಷ ಸಮಿತಿಯು ಈ ಕುರಿತಾಗಿ ಮೂರು ದಿನಗಳ ಜೈಲ್ ಬರೋ ಆಂದೋಲನವನ್ನು ಹಮ್ಮಿಕೊಂಡಿತ್ತು,ಇದರ ಫಲವಾಗಿ ಸೋಮವಾರ ಗಂಡಸರೂ ಮತ್ತು ಮಂಗಳವಾರ ಮಹಿಳೆಯರು ಎಂಬಂತೆ ಬಂಧನಕ್ಕೀಡಾಗಿದ್ದರು. ಅದರಂತೆ ಬುಧವಾರದಂದು ಮಕ್ಕಳನ್ನೂ ಪ್ರತಿಭಟನಾಕಾರರು ಈ ಕಾರ್ಯಕ್ಕೆ ತೊಡಗಿಸಲು ಮುಂದಾಗಿದ್ದರು.

ಈ ಪ್ರತಿಭಟನೆ ಮತ್ತು ಗಲಭೆಯಿಂದಾಗಿ ಜಮ್ಮು ಕಾಶ್ಮೀರ ರಾಜ್ಯಾದ್ಯಂತ ಸತ್ತವರ ಸಂಖ್ಯೆ 40ಕ್ಕೇರಿದೆಯೆಂದು ವರದಿ ತಿಳಿಸಿದೆ.
ಮತ್ತಷ್ಟು
ಬಿಎಂಡಬ್ಲ್ಯು ಬಯಲು ಪ್ರಕರಣ: ಹಿರಿಯ ವಕೀಲರಿಬ್ಬರು ತಪ್ಪಿತಸ್ಥರು
ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ
ಹೇವುಡ್ ವಿರುದ್ಧ ಶೋಧನಾ ನೋಟೀಸ್ ಹಿಂದಕ್ಕೆ
ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ
ಹೇವುಡ್ ಪರಾರಿ: ಅಧಿಕಾರಿಯ ವಜಾ