ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೆಹಲಿಗೆ ತಲುಪಿದ ಅಮರನಾಥ ಸಂಘರ್ಷ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಗೆ ತಲುಪಿದ ಅಮರನಾಥ ಸಂಘರ್ಷ
ಅಮರನಾಥ ಸಂಘರ್ಷ ಸಮಿತಿಯ ಪ್ರತಿಭಟನೆ ದೆಹಲಿಗೆ ತಲುಪಿದ್ದು, ಗುರುವಾರ ದೆಹಲಿಯಲ್ಲಿ ಪ್ರತಿಭಟನಕಾರರು ಬಂಧನಕ್ಕೀಡಾದರು.

ವಿಶ್ವಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಮತ್ತು ದೆಹಲಿ ವಿಧಾನಸಭೆಯ ಶಾಸಕರಾದ ಒ.ಪಿ.ಬಬ್ಬರ್, ಜಗದೀಶ್ ಮುಖಿ ಮತ್ತು ಎಚ್.ಎಸ್.ಬಾಲಿ ಅವರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಇತರರೊಂದಿಗೆ ಬಂಧನಕ್ಕೀಡಾದರು.

ಅಮರನಾಥ ಸಂಘರ್ಷ ಸಮಿತಿಯ ವಿವಿಧ ಸಂಘಟನೆಗಳ ಸದಸ್ಯರು ದೆಹಲಿಯ ಆರು ಪ್ರದೇಶಗಳ ದೆಹಲಿ ಉಪ ಆಯುಕ್ತರ ಕಚೇರಿಗಳಿಗೆ ಮೆರವಣಿಗೆ ತೆರಳಿ ಬಂಧನಕ್ಕೀಡಾದರು.

ಜೈಲ್ ಭರೋ ಕಾರ್ಯಕ್ರಮದಂಗವಾಗಿ ಏಳು ಸಾವಿರಕ್ಕೂ ಅಧಿಕ ಮಂದಿ ಬಂಧನಕ್ಕೀಡಾದರು ಎಂದು ಸಮಿತಿಯ ವಕ್ತಾರ ವಿನೋದ್ ಬನ್ಸಾಲ್ ಹೇಳಿದ್ದಾರೆ.

ಅಮರನಾಥ ಮಂದಿರ ಮಂಡಳಿಗೆ ಮಂಜೂರಾಗಿದ್ದ ಅರಣ್ಯ ಭೂಮಿ ಹಸ್ತಾಂತರದ ರದ್ದತಿಯನ್ನು ಪ್ರತಿಭಟಿಸಿ ಸಮಿತಿಯು ಪ್ರತಿಭಟನೆ ನಡೆಸುತ್ತಿದೆ.
ಮತ್ತಷ್ಟು
ಅಮರನಾಥ: ಜಮ್ಮುವಿನಲ್ಲಿ ಕರ್ಫ್ಯೂ ಸಡಿಲಿಕೆ
ಬಿಎಂಡಬ್ಲ್ಯು ಬಯಲು ಪ್ರಕರಣ: ಹಿರಿಯ ವಕೀಲರಿಬ್ಬರು ತಪ್ಪಿತಸ್ಥರು
ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ
ಹೇವುಡ್ ವಿರುದ್ಧ ಶೋಧನಾ ನೋಟೀಸ್ ಹಿಂದಕ್ಕೆ
ಸೌಹಾರ್ದ ಸಂಪ್ರದಾಯ ಸವಾಲಿಗೀಡಾಗಿದೆ: ಪಿಎಂ
ಮರುಕಳಿಸಿದ ಹಿಂಸಾಚಾರ: ಜಮ್ಮುವಿನಲ್ಲಿ ಮತ್ತೆ ಕರ್ಫ್ಯೂ