ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮುಂಬೈ ಸ್ಫೋಟ : 15 ವರ್ಷದ ಬಳಿಕ ಕರೀಮುಲ್ಲಾ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈ ಸ್ಫೋಟ : 15 ವರ್ಷದ ಬಳಿಕ ಕರೀಮುಲ್ಲಾ ಸೆರೆ
1993ರಲ್ಲಿ ನಡೆದ ಸರಣಿ ಬಾಂಬ್‌‌ಸ್ಫೋಟದ ಆರೋಪಿ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಚಚರ ಕರಿಮುಲ್ಲಾ ಖಾನ್‌ನನ್ನು ನಗರದ ನಲಸೊಪಾರಾ ಪ್ರದೇಶದಲ್ಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಸುಮಾರು 200 ಮಂದಿ ಪ್ರಾಣವನ್ನು ಕಳೆದುಕೊಂಡ ಮುಂಬೈ ಬಾಂಬ್‌ಸ್ಫೋಟದ ಸಂಚಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಆರೋಪಿ ಕರೀಮುಲ್ಲಾ ಖಾನ್‌ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದೆ . ಮುಂಬೈ ಸ್ಫೋಟ ಪ್ರಕರಣದಲ್ಲಿ ಸ್ಫೋಟಕಗಳನ್ನು ಸರಬರಾಜು ಮಾಡಿದ್ದಲ್ಲದೇ ಅವುಗಳನ್ನು ಆಯಕಟ್ಟಿನ ಸ್ಥಳದಲ್ಲಿ ಬಾಂಬ್‌ಗಳನ್ನು ಇಡುವಲ್ಲಿ ಮಹತ್ತರ ಪಾತ್ರವಹಿಸಿದ್ದನು. ಆರೋಪಿಯ ಪತ್ತೆಗೆ ಐದು ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಜಂಟಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ನೇಪಾಳದಲ್ಲಿ ತನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ದಾವೂದ್ ಇಬ್ರಾಹಿಂ, ಕರೀಮುಲ್ಲಾ ಖಾನ್‌ನನ್ನು ಕಾಠ್ಮಂಡುವಿಗೆ ಕಳುಹಿಸಿದ್ದ. ನಂತರ ಉತ್ತರ ಪ್ರದೇಶದ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿ ಮುಂಬೈನ ನಲಸೊಪಾರಾ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ವಾಸಿಸುತ್ತಿರುವ ಬಗ್ಗೆ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಐದು ದಿನಗಳ ಹಿಂದೆ ಥಾಣಾ ಪ್ರದೇಶದಲ್ಲಿರುವ ಸುಳಿವನ್ನು ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮುಂಬೈ ಸ್ಫೋಟದಲ್ಲಿ ಭಾಗಿಯಾಗಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರೀಮುಲ್ಲಾ ಖಾನ್ ಬಹುಭಾಷಾ ಪ್ರವೀಣನಾಗಿದ್ದರಿಂದ ಬಂಧಿಸುವಲ್ಲಿ ವಿಳಂಬವಾಯಿತು. ಯುವಕರನ್ನು ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳ ತರಬೇತಿ ಪಡೆಯಲು ಪಾಕ್‌ಗೆ ರವಾನಿಸುವುದಲ್ಲದೇ ಬಂದರುಗಳಿಗೆ ಬಂದಿಳಿದ ಸಾಮಗ್ರಿಗಳ ಕಳ್ಳಸಾಗಣೆ ಅಪರಾಧಗಳಲ್ಲಿ ಕೂಡಾ ಭಾಗಿಯಾಗಿದ್ದಾನೆ ಎಂದು ಜಂಟಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.
ಮತ್ತಷ್ಟು
ಜೆಕೆ ಪರಿಸ್ಥಿತಿ: ಸಂಪುಟಕ್ಕೆ ಎಂಕೆಎನ್ ವರದಿ
ಉ.ಪ್ರ: ಭಾರೀ ಸ್ಫೋಟಕ ಹೊಂದಿದ್ದ ಇಬ್ಬರ ಬಂಧನ
ದೆಹಲಿಗೆ ತಲುಪಿದ ಅಮರನಾಥ ಸಂಘರ್ಷ
ಅಮರನಾಥ: ಜಮ್ಮುವಿನಲ್ಲಿ ಕರ್ಫ್ಯೂ ಸಡಿಲಿಕೆ
ಬಿಎಂಡಬ್ಲ್ಯು ಬಯಲು ಪ್ರಕರಣ: ಹಿರಿಯ ವಕೀಲರಿಬ್ಬರು ತಪ್ಪಿತಸ್ಥರು
ಪಾಕ್‌ನಿಂದ ಮತ್ತೊಮ್ಮೆ ಕದನ ವಿರಾಮ ಉಲ್ಲಂಘನೆ