ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದಾವೂದ್ ಕರಾಚಿಯಲ್ಲಿ: ಕರಿಮುಲ್ಲಾ ಹೇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವೂದ್ ಕರಾಚಿಯಲ್ಲಿ: ಕರಿಮುಲ್ಲಾ ಹೇಳಿಕೆ
ಮುಂಬೈ: ಭಾರತಕ್ಕೆ ಅತ್ಯಂತ ಬೇಕಾಗಿರುವ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂದು ಕುಖ್ಯಾತ ಭೂಗತ ಪಾತಕಿ ಹಾಗೂ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಆರೋಪಿ ಕರಿಮುಲ್ಲಾ ಖಾನ್ ಪೊಲೀಸರಿಗೆ ತಿಳಿಸಿದ್ದಾನೆನ್ನಲಾಗಿದೆ. ಈತನನ್ನು ಕ್ರೈಂ ಬ್ರಾಂಚ್ ಪೊಲೀಸರು ಎರಡು ದಿನಗಳ ಹಿಂದೆ ನಲಸೊಪರ ಪ್ರದೇಶದಿಂದ ಬಂಧಿಸಿದ್ದಾರೆ.

ಕರಿಮುಲ್ಲಾನ ತಲೆಗೆ ಸಿಬಿಐ ಪೊಲೀಸರು ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು. ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂನ ಸಹಚರ ನಾಗಿರುವ ಈತ ಮುಂಬೈ ಸರಣಿ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈತ ಸ್ಫೋಟಕಗಳ ವ್ಯವಸ್ಥೆ ಮಾಡಿದ್ದು ಮಾತ್ರವಲ್ಲದೆ ಅದನ್ನು ವಿವಿಧೆಡೆಯಲ್ಲಿ ಇಡುವಲ್ಲಿಯೂ ಸಹಕರಿಸಿದ್ದ.

ಶೇಖಡಿ, ಮಸ್ಲ ಕೋಟೆಗಳಲ್ಲಿ ಆರ್‌ಡಿಎಕ್ಸ್ ಇರಿಸಲು ಮತ್ತು ಮುಂಬ್ರ ಪ್ರದೇಶಕ್ಕೆ ಅದನ್ನು ಸಾಗಿಸುವಲ್ಲಿ ಕರಿಮುಲ್ಲಾ ಸಹಾಯ ಮಾಡಿದ್ದ. ಅಲ್ಲದೆ ಮುಂಬೈಗೆ ಆರ್‌ಡಿಎಕ್ಸ್ ಸಾಗಿಸುವಲ್ಲಿಯೂ ಈತ ಪ್ರಮುಖ ಪಾತ್ರ ವಹಿಸಿದ್ದ.

ಮುಂಬೈ ಸರಣಿ ಸ್ಫೋಟಗಳ ಬಳಿಕ ಈತ ಉತ್ತರ ಪ್ರದೇಶದ ಗಡಿಯ ಮೂಲಕ ನೇಪಾಳಕ್ಕೆ ತೆರಳಿ ಅಲ್ಲಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಅಲ್ಲಿ ದಾವೂದ್ ಇಬ್ರಾಹಿಂ ಜತೆ ತಲೆ ಮರೆಸಿಕೊಂಡಿದ್ದ.

2006ರಲ್ಲಿ ಮುಂಬೈಗೆ ಮರಳಿದ್ದ ಈತ ನಗರದ ಹೊರವಲಯದ ಮೀರ ರಸ್ತೆಯಲ್ಲಿ ವಾಸ್ತವ್ಯ ಹೂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ಇರುವಿಕೆಯ ಖಚಿತ ಮಾಹಿತಿ ಪಡೆದ ಪೊಲೀಸರು ನಡೆಸಿರುವ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕರೀಮುಲ್ಲಾ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಮುಂಬೈ ಸ್ಫೋಟದಲ್ಲಿ ಒಳಗೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಮತ್ತಷ್ಟು
ಮುಂಬೈ ಸ್ಫೋಟ : 15 ವರ್ಷದ ಬಳಿಕ ಕರೀಮುಲ್ಲಾ ಸೆರೆ
ಜೆಕೆ ಪರಿಸ್ಥಿತಿ: ಸಂಪುಟಕ್ಕೆ ಎಂಕೆಎನ್ ವರದಿ
ಉ.ಪ್ರ: ಭಾರೀ ಸ್ಫೋಟಕ ಹೊಂದಿದ್ದ ಇಬ್ಬರ ಬಂಧನ
ದೆಹಲಿಗೆ ತಲುಪಿದ ಅಮರನಾಥ ಸಂಘರ್ಷ
ಅಮರನಾಥ: ಜಮ್ಮುವಿನಲ್ಲಿ ಕರ್ಫ್ಯೂ ಸಡಿಲಿಕೆ
ಬಿಎಂಡಬ್ಲ್ಯು ಬಯಲು ಪ್ರಕರಣ: ಹಿರಿಯ ವಕೀಲರಿಬ್ಬರು ತಪ್ಪಿತಸ್ಥರು