ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹುರಿಯತ್ ಬಲಪ್ರದರ್ಶನ, ಲಕ್ಷಾಂತರ ಮಂದಿ ಈದ್ಗಾದತ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುರಿಯತ್ ಬಲಪ್ರದರ್ಶನ, ಲಕ್ಷಾಂತರ ಮಂದಿ ಈದ್ಗಾದತ್ತ
ಶ್ರೀನಗರ: ಹುರಿಯತ್ ಕಾನ್ಫರೆನ್ಸ್ ಶುಕ್ರವಾರ ಬೃಹತ್ ಈದ್ಗಾ ಜಾಥಾಗೆ ಕರೆ ನೀಡಿದ್ದು ಇದರಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ.

ಈದ್ಗಾ ಚಲೋ ಜಾಥಾವು ಮಧ್ಯಾಹ್ನ ಎರಡು ಗಂಟೆಗೆ ಆರಂಭವಾಗಲಿದ್ದು, ಇದರಲ್ಲಿ ಕನಿಷ್ಠ ಐದು ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಕಳೆದ ವಾರ ಮುಜಾಫರಾಬಾದ್, ಪಾಂಪೋರ್‌ನ ವಿಶ್ವಸಂಸ್ಥೆಯ ಕಚೇರಿಯ ಹೊರಗಡೆ ನಡೆಸಿದ ಬಲಪ್ರದರ್ಶನದ ಬಳಿಕ ಶುಕ್ರವಾರದ ರ‌್ಯಾಲಿ ನಡೆಯುತ್ತಿದೆ.

ಶುಕ್ರವಾರದ ಈ ಪ್ರತಿಭಟನೆಯು ಭದ್ರತಾಪಡೆಗಳಿಗೆ ದೊಡ್ಡ ತಲೆನೋವಾಗಿದೆ. ಈ ಹಿಂದಿನ ಪ್ರತಿಭಟನೆಯ ವೇಳೆಗೆ ಪ್ರತಿಭಟನಾಕಾರರನ್ನು ಭದ್ರತಾಪಡೆಗಳು ನಿಭಾಯಿಸಿರುವ ರೀತಿಯು ವ್ಯಾಪಕ ಟೀಕೆಗೀಡಾಗಿದೆ.

ನಿರಾಯುಧರಾಗಿರುವ ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸಬಾರದು, ಬದಲಿಗೆ, ಅಶ್ರುವಾಯು, ರಬ್ಬರ್ ಗುಂಡುಗಳು ಅಥವಾ ಲಾಠಿಚಾರ್ಜ್ ನಡೆಸಬೇಕು ಎಂಬ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ಮತ್ತಷ್ಟು
ಎನ್ಎಸ್‌ಜಿ ಸಭೆಯಲ್ಲಿ 3 ರಾಷ್ಟ್ರಗಳ ಪ್ರಶ್ನೆ
ಸಿಮಿ ಬೆಂಬಲಿಗ ಪಕ್ಷಗಳ ವಿರುದ್ಧ ಕಾರ್ಯಾಚರಣೆಗೆ ಬಿಜೆಪಿ ಒತ್ತಾಯ
ದಾವೂದ್ ಕರಾಚಿಯಲ್ಲಿ: ಕರಿಮುಲ್ಲಾ ಹೇಳಿಕೆ
ಮುಂಬೈ ಸ್ಫೋಟ : 15 ವರ್ಷದ ಬಳಿಕ ಕರೀಮುಲ್ಲಾ ಸೆರೆ
ಜೆಕೆ ಪರಿಸ್ಥಿತಿ: ಸಂಪುಟಕ್ಕೆ ಎಂಕೆಎನ್ ವರದಿ
ಉ.ಪ್ರ: ಭಾರೀ ಸ್ಫೋಟಕ ಹೊಂದಿದ್ದ ಇಬ್ಬರ ಬಂಧನ