ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣುಒಪ್ಪಂದ: ಎನ್ಎಸ್‍ಜಿ ಕರಡು ತಿದ್ದುಪಡಿ ಸುಳಿವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಒಪ್ಪಂದ: ಎನ್ಎಸ್‍ಜಿ ಕರಡು ತಿದ್ದುಪಡಿ ಸುಳಿವು
ಅಣು ಸರಬರಾಜು ವಿಚಾರದಲ್ಲಿ ಭಾರತಕ್ಕೆ ವಿನಾಯಿತಿ ನೀಡುವ ಕುರಿತಂತೆ ಎನ್ಎಸ್‌ಜಿ ರಾಷ್ಟ್ರಗಳು ಒಮ್ಮತಕ್ಕೆ ಬರದಿರುವ ಹಿನ್ನೆಲೆಯಲ್ಲಿ, ಕರಡು ಪ್ರತಿಗೆ ತಿದ್ದುಪಡಿ ತರುವ ಸುಳಿವನ್ನು ಅಮೆರಿಕ ಶುಕ್ರವಾರ ನೀಡಿದೆ.

ಏನುಮಾಡಲು ಸಾಧ್ಯ ಎಂಬುದನ್ನು ಭಾರತ ಮತ್ತು ಅಮೆರಿಕ ಚರ್ಚಿಸಲಿದೆ ಎಂದೂ ಆಮೆರಿಕ ಹೇಳಿದೆ. ಭಾರತ-ಅಮೆರಿಕ ನಡುವಿನ ಅಣುಒಪ್ಪಂದದ ಕುರಿತ ಯಾವುದೇ ವಿರೋಧಕ್ಕೆ ಅವಕಾಶ ನೀಡಲಾಗದು ಎಂದು ಅಮೆರಿಕ ವಿದೇಶಾಂಗ ಇಲಾಖೆಯ(ದಕ್ಷಿಣ ಏಷ್ಯಾ) ಸಹಾಯಕ ಕಾರ್ಯದರ್ಶಿ ರಿಚರ್ಡ್ ಬುಚರ್ ಹೇಳಿದ್ದಾರೆ.

"ನಾನು ನಿಮಗೆ ಸುಳ್ಳು ಹೇಳಲು ಬಯಸುವುದಿಲ್ಲ. ನಾನು ಸುಳ್ಳು ಹೇಳಲು ಸಾಧ್ಯವಿಲ್ಲ. ನಾವು ಸ್ವೀಕರಿಸಬಹುದಾದ ಕೆಲವು ಬದಲಾವಣೆಗಳನ್ನು ಮಾಡಬಹುದು. ಆದರೆ ನಾವು ಸ್ಪಷ್ಟ ಪಠ್ಯಕ್ಕಾಗಿ ಪ್ರಯತ್ನಿಸುತ್ತೇವೆ" ಎಂದು ಬುಚರ್ ಮುಂಬೈಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತಕ್ಕೆ ನಾಗರಿಕ ಪರಮಾಣು ವ್ಯವಹಾರಕ್ಕೆ ವಿನಾಯಿತಿ ನೀಡಬಹುದೇ ಎಂಬ ಕುರಿತು ಚರ್ಚಿಸಲು 45 ರಾಷ್ಟ್ರಗಳ ಸದಸ್ಯತ್ವದ ಅಣು ಸರಬರಾಜು ಸಮೂಹ ವಿಯೆನ್ನಾದಲ್ಲಿ ಸಭೆ ಸೇರಿರುವ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು.

ಭಾರತ ಮತ್ತು ಅಮೆರಿಕ ಜತೆಯಲ್ಲಿ ಕುಳಿತು ಯಾವುದಕ್ಕೆ ಅವಕಾಶ ನೀಡಬಹುದು ಮತ್ತು ಯಾವುದಕ್ಕೆ ಅವಕಾಶ ನೀಡಲಾಗದು ಎಂಬುದನ್ನು ಚರ್ಚಿಸಲಿದೆ. ಇದನ್ನು ಒಳಗೊಂಡಿರುವ ಇತರ ಸರಕಾರಗಳೊಂದಿಗೂ ಮಾತುಕತೆ ನಡೆಸಲಿರುವುದಾಗಿ ಅವರು ಹೇಳಿದ್ದಾರೆ. ಗರುವಾರದ ಎನ್ಎಸ್‌ಜಿ ಸಭೆಯಲ್ಲಿ ಅಮೆರಿಕ ಮಂಡಿಸಲಾಗಿರುವ ಕರಡಿಗೆ ಯಾವ ರೀತಿಯ ಬದಲಾವಣೆ ಮಾಡಲಾಗುವುದು ಎಂಬುದನ್ನು ಅವರು ನಿಖರವಾಗಿ ಹೇಳಲಿಲ್ಲ.

ಬೇಷರತ್ ವಿನಾಯತಿಯ ಖಚಿತತೆಗೆ ಆಸಕ್ತಿ ಹೊಂದಿರುವ ವಾಶಿಂಗ್ಟನ್ ಮತ್ತು ನವದೆಹಲಿಗಳ ನಡುವಿನ ಬಿಗಿ ಮಾತುಕತೆಗಳ ಬಳಿಕ ಈ ಕರಡನ್ನು ಸಿದ್ಧಗೊಳಿಸಲಾಗಿತ್ತು.

ತಾನು ಮಾತನಾಡಿರುವ ಹೆಚ್ಚಿನ ರಾಷ್ಟ್ರಗಳು ಮತ್ತು ವಿಯೆನ್ನಾದಿಂದ ಕೇಳಿಬರುತ್ತಿರುವ ಹೆಚ್ಚಿನ ರಾಷ್ಟ್ರಗಳ ಅಭಿಪ್ರಾಯಗಳು ಧನಾತ್ಮಕವಾಗಿವೆ. ಭಾರತಕ್ಕೆ ಸಹಕರಿಸುವ ಪ್ರಾಮುಖ್ಯತೆಯ ಕುರಿತು ಅವರಿಗೆ ಅರಿವಿದೆ ಎಂದು ಬುಚರ್ ಹೇಳಿದ್ದಾರೆ.
ಮತ್ತಷ್ಟು
ಅಣು ಬಂಧ: ಒಮ್ಮತಕ್ಕೆ ಬಾರದ ಎನ್‌ಎಸ್‌ಜಿ
ಸೋನಿಯಾ ಹೇಳಿದರೆ ರಾಜೀನಾಮೆ ನೀಡುವೆ: ಕೋಡಾ
ಮೋಸಗಾರ ಎನ್ಆರ್ಐ ಪತಿಯರ ಪತ್ತೆಗೆ ಕಾನೂನು
ಯುಪಿಎ ಸಮಾಲೋಚನೆಗೆ ಕೋಡಾ ದೆಹಲಿಗೆ
ದಾವೂದ್‌ನಿಂದ ಸಿಮಿಗೆ ಹಣಪೂರೈಕೆ
ಹುರಿಯತ್ ಬಲಪ್ರದರ್ಶನ, ಲಕ್ಷಾಂತರ ಮಂದಿ ಈದ್ಗಾದತ್ತ