ಭಾರತದೊಂದಿಗೆ ಅಣು ವ್ಯವಹಾರಕ್ಕಾಗಿ ವಿನಾಯಿತಿ ನೀಡಲು 45 ರಾಷ್ಟ್ರಗಳ ಸದಸ್ಯತ್ವದ ಎನ್ಎಸ್‌ಜಿ ಸಮೂಹವು ಒಮ್ಮತಕ್ಕೆ ಬರಲಾಗದೆ ಮುಂದಿನ ತಿಂಗಳು ಸಭೆಸೇರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಅಮೆರಿಕದೊಂದಿಗೆ ಮಾತುಕತೆ ನಡೆಸಲು ಮುಂದಿನ ವಾರದ ಆದಿಯಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.
ಕೆಲವು ರಾಷ್ಟ್ರಗಳು ತಮ್ಮ ಅಭಿಪ್ರಾಯ ಕಾಯ್ದಿರಿಸಿರುವ ಹಿನ್ನೆಲೆಯಲ್ಲಿ, ಎನ್ಎಸ್‌ಜಿಯಿಂದ ಕ್ಷಿಪ್ರ ಮತ್ತು ಶೀಘ್ರ ವಿನಾಯಿತಿ ಪಡೆಯುವ ಭಾರತದ ಪ್ರಯತ್ನ ಕಾರ್ಯಗತಗೊಳ್ಳಲಿಲ್ಲ.
ಸೋಮವಾರ ಅಮೆರಿಕಕ್ಕೆ ತೆರಳಲಿರುವ ಮೆನನ್ ಅವರು ಅಣು ಒಪ್ಪಂದವಲ್ಲದೆ, ಮುಷರಫ್ ರಾಜೀನಾಮೆಯ ಬಳಿಕ ಪಾಕಿಸ್ತಾನದಲ್ಲಿ ಉದ್ಭವಿಸಿರುವ ಪ್ರಸಕ್ತ ವಿದ್ಯಮಾನಗಳು ಮತ್ತು ಕಾಶ್ಮೀರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಕುರಿತು ವಿದೇಶಾಂಗ ಇಲಾಖೆಯ ಆಧೀನ ಕಾರ್ಯದರ್ಶಿ ವಿಲಿಯಂ ಬರ್ನ್ಸ್ ಅವರೊಂದಿಗೆ ಚರ್ಚಿಸಲಿದ್ದಾರೆ.
ಆದರೆ, ಮೆನನ್ ಅವರ ಅವರ ಈ ಪ್ರವಾಸವು ಈ ಹಿಂದೆಯೇ ನಿಗದಿಯಾಗಿತ್ತು ಎಂದು ಮೂಲಗಳು ಹೇಳಿದ್ದು, ಎನ್ಎಸ್‌ಜಿ ಸಭೆಯ ಬಳಿಕ ತೆರಳುತ್ತಿರುವುದು ಕಾಕತಾಳೀಯ ಎಂದು ಹೇಳಿದ್ದಾರೆ.
ನಾಗರಿಕ ಅಣು ಉಪಕ್ರಮ ಮಾತ್ರವಲ್ಲ, ಭಾರತದ ಸುತ್ತಮುತ್ತ ಏನು ಸಂಭವಿಸುತ್ತಿದೆ ಎಂಬ ಇತರ ಹಲವು ವಿಚಾರಗಳ ಕುರಿತೂ ಮೆನನ್ ಭೇಟಿಯ ವೇಳೆಗೆ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
|