ಅಜ್ಮೀರ್ ಮತ್ತು ಜೈಪುರಗಳಲ್ಲಿ ವಶಕ್ಕೆ ತೆಗೆದುಕೊಂಡಿರುವ ಐದು ವೈದ್ಯಕೀಯ ವಿದ್ಯಾರ್ಥಿಗಳನ್ನು ವಿಚಾರಣೆಯ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಪುರ ಮತ್ತು ಅಹಮದಾಬಾದಿನಲ್ಲಿ ನಡೆಸೆಲಾಗಿರುವ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪಾತಕಿಗಳೊಂದಿಗೆ ಸಂಪರ್ಕ ಶಂಕೆಯಿಂದ ಇವರನ್ನು ವಶಪಡಿಸಿಕೊಳ್ಳಲಾಗಿತ್ತು.
ಅಜ್ಮೀರ್‌ನಿಂದ ನಾಲ್ಕು ವೈದ್ಯಕೀಯ ವಿದ್ಯಾರ್ಥಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಿವಾಯಿ ಎಂಬಲ್ಲಿಂದ ಎಐಐಎಂಎಸ್ ತರಬೇತಿ ಪಡೆದಿದ್ದ ವೈದ್ಯನನ್ನು ಸ್ಫೋಟಶಂಕಿತರೊಂದಿಗಿನ ಸಂಪರ್ಕದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇದೀಗ ಈ ಐದೂ ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಅಹಮದಾಬಾದ್ ಮತ್ತು ಜೈಪುರ ಬಾಂಬ್ ಸ್ಫೋಟಗಳ ಪ್ರಧಾನ ಶಂಕಿತರ ಬಂಧನದ ಬಳಿಕ ರಾಜಸ್ಥಾನ ಪೊಲೀಸರು ಹಲವು ಮಂದಿಯನ್ನು ವಿಚಾರಣೆಗಾಗಿ ವಶಪಡಿಸಿಕೊಂಡಿದ್ದಾರೆ. ಅವರಲ್ಲಿ ಕೆಲವರ ವಿಚಾರಣೆ ಇನ್ನೂ ಮುಂದುವರಿದಿದೆ.
|