ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಲವಂತದ ಷರತ್ತುಗಳನ್ನು ಸ್ವೀಕರಿಸುವುದಿಲ್ಲ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಲವಂತದ ಷರತ್ತುಗಳನ್ನು ಸ್ವೀಕರಿಸುವುದಿಲ್ಲ
ಭಾರತ-ಅಮೆರಿಕ ಅಣುಒಪ್ಪಂದವನ್ನು ಕಾರ್ಯಗತಗೊಳಿಸಲು ಎನ್ಎಸ್‌ಜಿಯಿಂದ ವಿನಾಯಿತಿ ಪಡೆಯಲೋಸುಗ ಭಾರತವು ಯಾವುದೇ 'ಬಲವಂತದ ಷರತ್ತು'ಗಳನ್ನು ಸ್ವೀಕರಿಸದು ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಶನಿವಾರ ಹೇಳಿದ್ದಾರೆ.

"ಯಾವ ರೀತಿಯ ತಿದ್ದುಪಡಿಗಳೆಂಬುದನ್ನು ನಾವು ನೋಡಬೇಕು. ಆ ಬಳಿಕವಷ್ಟೆ ನಾವು ಯಾವುದೇ ನಿರ್ಧಾರ ಕೈಗೊಳ್ಳಬಹುದು. ಆದರೆ ಬಲವಂತದ ಷರತ್ತುಗಳನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮುಖರ್ಜಿ ತಿಳಿಸಿದ್ದಾರೆ. ಅವರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೊಂದಿಗೆ ಪಶ್ಚಿಮಬಂಗಾಳಕ್ಕೆ ಪ್ರಯಾಣ ಬೆಳೆಸಿರುವ ಅವರು ವಿಮಾನದಲ್ಲಿ ಪ್ರಯಾಣಿಸುತ್ತಾ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ವಿಯೆನ್ನಾದಲ್ಲಿ ನಡೆದ ಅಣು ಪೂರೈಕೆ ಸಮೂಹ(ಎನ್ಎಸ್‌ಜಿ) ಸಭೆಯಲ್ಲಿ ಕೆಲವು ರಾಷ್ಟ್ರಗಳು ತಮ್ಮ ಅಭಿಪ್ರಾಯವನ್ನು ಮೀಸಲಿರಿಸಿರುವ ಹಿನ್ನೆಲೆಯಲ್ಲಿ ಸರಕಾರದ ಮುಂದಿನ ಕ್ರಮವೇನು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದರು. ನಾಗರಿಕ ಅಣು ವ್ಯವಹಾರ ಸಂಬಂಧ ಭಾರತಕ್ಕೆ ವಿನಾಯಿತಿ ನೀಡುವ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರಡು ಪ್ರತಿಗೆ ತಿದ್ದುಪಡಿ ಮಾಡುವ ಸುಳಿವನ್ನು ಅಮೆರಿಕ ನೀಡಿದೆ.

45 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಎನ್ಎಸ್‌ಜಿಯ ಎರಡು ದಿನಗಳ ಸಭೆಯಲ್ಲಿನ ವಿದ್ಯಮಾನಗಳ ಕುರಿತು ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್ ತಮಗೆ ವಿವರಣೆ ನೀಡಿರುವುದಾಗಿ ಮುಖರ್ಜಿ ತಿಳಿಸಿದರು.

ಎನ್ಎಸ್‌ಜಿ ಸಭೆಯನ್ನು ರಚನಾತ್ಮಕ ಮತ್ತು ಉಪಯುಕ್ತ ಎಂಬುದಾಗಿ ವಿವರಿಸಿದ್ದ ಮೆನನ್, ಎನ್ಎಸ್‌ಜಿ ಸದಸ್ಯ ರಾಷ್ಟ್ರಗಳ ಹಲವಾರು ಪ್ರತಿನಿಧಿಗಳನ್ನು ಭೇಟಿಯಾಗಿರುವುದಾಗಿ ಹೇಳಿದ್ದರು.

ಎನ್ಎಸ್‌ಜಿಯ ಅಣುವ್ಯಾಪಾರ ನಿರ್ದೇಶನ ತತ್ವಗಳಲ್ಲಿ ವಿನಾಯಿತಿಯು ನಾಗರಿಕ ಅಣು ಸಹಕಾರಕ್ಕೆ ಸಹಾಯಮಾಡಲಿದೆ ಮತ್ತು ಇದು ಭಾರತ ಮತ್ತು ಎನ್‌ಎಸ್‌ಜಿ ಸಹಕಾರಕ್ಕೆ ಅವಶ್ಯಕವಾದ ಹೆಜ್ಜೆಯಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.
ಮತ್ತಷ್ಟು
ಸ್ಫೋಟ: ವೈದ್ಯಕೀಯ ವಿದ್ಯಾರ್ಥಿಗಳ ಬಿಡುಗಡೆ
ದಾವೂದ್ ಬೆಂಗಾವಲಿಗೆ ಪಾಕ್ ನಿವೃತ್ತ ಸೇನಾಧಿಕಾರಿಗಳು
ಶಿವಶಂಕರ ಮೆನನ್ ಅಮೆರಿಕ ಭೇಟಿ
ಹೇವುಡ್ ಪ್ರಕರಣ ಭಾರತದ ನ್ಯಾಯಾಂಗ ವಿಚಾರ: ಯುಎಸ್
ಅಣುಒಪ್ಪಂದ: ಎನ್ಎಸ್‍ಜಿ ಕರಡು ತಿದ್ದುಪಡಿ ಸುಳಿವು
ಅಣು ಬಂಧ: ಒಮ್ಮತಕ್ಕೆ ಬಾರದ ಎನ್‌ಎಸ್‌ಜಿ