ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಸಿಂಗೂರ್ ಭೂಮಿ ವಿವಾದ ಕುರಿತಂತೆ ಭಾನುವಾರ ಶಾಂತಿಯುತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ನ್ಯಾನೊ ಘಟಕ ಸ್ಥಳಾಂತರ ಬೇಡ. ಕಾರ್ಖಾನೆ 600 ಎಕರೆಗೆ ಸೀಮಿತವಾಗಿರಲಿ ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್ ಘಟಕದ ಮುಖ್ಯದ್ವಾರದ ಬಳಿ ನಿರ್ಮಿಸಲಾದ ವೇದಿಕೆಯಿಂದ ಮಾತನಾಡಿದ ಮಮತಾ, ನೀವು ನಕ್ಕರೆ ಇತರರು ನಗುತ್ತಾರೆ ನ್ಯಾನೊ ಘಟಕಕ್ಕೆ ನೀಡಿದ 400 ಎಕರೆ ರೈತರ ಭೂಮಿಯನ್ನು ಮರಳಿಸುವಂತೆ ಆಗ್ರಹಿಸಿದರು.

ಟಾಟಾ ಮೋಟಾರ್ಸ ಅಧಿಕಾರಿಗಳು ನನಗೆ ಬರೆದ ಪತ್ರದಲ್ಲಿ ನ್ಯಾನೊ ಘಟಕಕ್ಕೆ 600 ಎಕರೆ ಭೂಮಿ ಮಾತ್ರ ಅಗತ್ಯವಾಗಿದೆ ಎಂದು ಹೇಳಿದ್ದು ದಯವಿಟ್ಟು ದಿನಕ್ಕೊಂದು ನಿಲುವು ಬದಲಿಸಬೇಡಿ ಎಂದು ಮಮತಾ ಟಾಟಾ ಅಧಿಕಾರಿಗಳಿಗೆ ಮನವಿ ಮಾಡಿದರು.

ತಾವು ಹಮ್ಮಿಕೊಂಡ ಅನಿರ್ದಿಷ್ಟಾವಧಿ ಸತ್ಯಾಗೃಹ ಶಾಂತಿಯುತವಾಗಿರಲಿ ಎಂದು ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಮಮತಾ ಬ್ಯಾನರ್ಜಿ ಮನವಿ ಮಾಡಿದರು.
ಮತ್ತಷ್ಟು
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ
ಜಾರ್ಖಂಡ್: ಮಧು ಕೋಡಾ ರಾಜೀನಾಮೆ
ಜಮ್ಮು: ಮೊದಲ ಸುತ್ತಿನ ಮಾತುಕತೆ
ವಿತರಕರಿಂದ ರಜನಿ ಸಿನಿಮಾ ಬಹಿಷ್ಕಾರ ಬೆದರಿಕೆ
ಬಲವಂತದ ಷರತ್ತುಗಳನ್ನು ಸ್ವೀಕರಿಸುವುದಿಲ್ಲ