ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಹುರಿಯತ್ 'ಆಜಾದಿ' ಜಾಥಾ ಸಜ್ಜು; ಕಣಿವೆ ಉದ್ವಿಗ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುರಿಯತ್ 'ಆಜಾದಿ' ಜಾಥಾ ಸಜ್ಜು; ಕಣಿವೆ ಉದ್ವಿಗ್ನ
ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದ್ದರೂ, ಹುರಿಯತ್ ನಾಯಕರು ತಮ್ಮ ಬಲಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಕೆಂಪು ಚೌಕಕ್ಕೆ ಹುರಿಯತ್ ಸಂಘಟನೆ ಸ್ವಾತಂತ್ರ್ಯ(ಆಜಾದಿ) ಜಾಥಾ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪ್ರತ್ಯೇಕತಾ ನಾಯಕರಾದ ಸಯೀದ್ ಅಲಿ ಶಾ ಗಿಲಾನಿ ಮತ್ತು ಮಿರ್ವಾಯಿಜ್ ಉಮರ್ ಫಾರೂಕ್ ಅವರುಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿದೆ. ಅಲ್ಲದೆ ಹುರಿಯತ್‌ನ ಹಲವಾರು ದ್ವಿತೀಯ ಸ್ತರದ ನಾಯಕರನ್ನೂ ಬಂಧಿಸಲಾಗಿದೆ.

ಗಲಭೆ ಹತ್ತಿಕ್ಕಲು ಸಾಧ್ಯಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪತ್ರಕರ್ತರಿಗೂ ವಿನಾಯಿತಿ ನೀಡಿಲ್ಲ. ಅವರಿಗೂ ಏಟು ಬಿದ್ದಿದೆ. ಅಲ್ಲದೆ ಪ್ರಸಕ್ತ ವಿದ್ಯಮಾನಗಳ ಕುರಿತು ಸುದ್ದಿ ಪ್ರಸಾರ ಮಾಡದಂತೆ ಸ್ಥಳೀಯ ಕೇಬಲ್ ವಾಹಿನಿಗಳಿಗೆ ತಾಕೀತು ಮಾಡಲಾಗಿದೆ.

ಒಂಭತ್ತು ಜಿಲ್ಲೆಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದ್ದು, ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೆ ಸೇನೆಯು ಸರಕಾರಕ್ಕೆ ಸಹಾಯ ನೀಡಲಿದೆ. ಇತ್ತೀಚಿನ ವಾರಗಳಲ್ಲಿ ಇದೇ ಪ್ರಥಮವಾಗಿ ಎಲ್ಲಾ ಒಂಭತ್ತು ಜಿಲ್ಲೆಗಳಲ್ಲಿ ಸೇನೆ ನಿಯೋಜಿಸಲಾಗಿದೆ.
ಮತ್ತಷ್ಟು
ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ
ಜಾರ್ಖಂಡ್: ಮಧು ಕೋಡಾ ರಾಜೀನಾಮೆ
ಜಮ್ಮು: ಮೊದಲ ಸುತ್ತಿನ ಮಾತುಕತೆ
ವಿತರಕರಿಂದ ರಜನಿ ಸಿನಿಮಾ ಬಹಿಷ್ಕಾರ ಬೆದರಿಕೆ