ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸರಕಾರ ರಚಿಸಲು ಇಂದು ಶಿಬು ಹಕ್ಕು ಮಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರ ರಚಿಸಲು ಇಂದು ಶಿಬು ಹಕ್ಕು ಮಂಡನೆ
PTI
ಜಾರ್ಖಂಡ್ ಮುಖ್ಯಮಂತ್ರಿ ಗದ್ದುಗೆ ಏರಲು ಶತಾಯ ಗತಾಯ ಪ್ರಯತ್ನದಲ್ಲಿರುವ ಶಿಬುಸೊರೇನ್, ಸೋಮವಾರ ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ. ಏತನ್ಮಧ್ಯೆ, ಉಸ್ತುವಾರಿ ಮುಖ್ಯಮಂತ್ರಿ ಮಧು ಕೋಡಾ ನೇತೃತ್ವದ ಏಳು ಮಂದಿ ಸ್ವತಂತ್ರ ಶಾಸಕರು ಬೆಂಬಲಿಸಲು ನಿರಾಕರಿಸಿರುವುದು ಶಿಬು ಅವರಿಗೆ ಹಿನ್ನೆಡೆಯುಂಟುಮಾಡಿದೆ.

ಜಾರ್ಖಂಡ್ ರಾಜ್ಯಪಾಲ ಸಯೀದ್ ಸಿಬ್ಟೆ ರಾಝಿ ಅವರನ್ನು ಶುಕ್ರವಾರ ರಾತ್ರಿ ಶಿಬು ಪುತ್ರ ದುರ್ಗ ಮತ್ತು ಮಿತ್ರಪಕ್ಷ ಎನ್‌ಸಿಪಿ ಶಾಸಕ ಕಮಲೇಶ್ ಸಿಂಗ್ ಅವರು ರಾಜಭವದಲ್ಲಿ ಭೇಟಿಯಾಗಿದ್ದು, ರಾಜ್ಯಪಾಲರನ್ನು ಗುರೂಜಿ(ಶಿಬು) ಭೇಟಿಯಾದ ಬಳಿಕ ಸರಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ ಎಂದು ಹೇಳಿದ್ದಾರೆ. ಶಿಬು ಅವರು ಸರಕಾರ ರಚನೆಗೆ ಅಗ್ಯವಿರುವ ಮ್ಯಾಜಿಕ್ ಸಂಖ್ಯೆಯ ಶಾಸಕರು ಬೆಂಬಲ ಹೊಂದಿದ್ದಾರೆ ಎಂದು ಹೇಳಿದ್ದಾರಾದರೂ, ಶಾಸಕರ ನಿಖರ ಸಂಖ್ಯೆಯನ್ನು ತಿಳಿಸಿಲ್ಲ.

ಆಗಸ್ಟ್ 25ರಂದು ನಿಗದಿಯಾಗಿದ್ದ ವಿಶ್ವಾಸಮತ ಯಾಚನೆಗೆ ಮುಂಚಿತವಾಗಿಯೇ ಮಧುಕೋಡಾ ಅವರು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು, ಶಿಬು ಹಾದಿ ಸುಗಮಗೊಳಿಸಿದೆ.

ಶಿಬು ಅವರಿಗೆ ರಾಷ್ಟ್ರೀಯ ಜನತಾ ದಳದ ಲಾಲೂ ಪ್ರಸಾದ್ ಯಾದವ್ ಅವರ ಬೆಂಬಲ ಲಭಿಸಿದೆ. ಅವರ ಪಕ್ಷವು ಏಳು ಶಾಸಕರನ್ನು ಹೊಂದಿದೆ. 82 ಸ್ಥಾನ ಬಲದ ಸದನದಲ್ಲಿ ಬಹುಮತಕ್ಕೆ 41 ಮಂದಿಯ ಬೆಂಬಲದ ಅವಶ್ಯಕತೆ ಇದೆ. ಶಿಬು ಇವರ ಜೆಎಂಎಂ ಪಕ್ಷ 17 ಶಾಸಕರನ್ನು ಹೊಂದಿದೆ. ಕಾಂಗ್ರೆಸ್‌ನ 9, ಆರ್‌ಜೆಡಿಯ 7, ಎನ್‌ಸಿಪಿಯ 1 ಮತ್ತು ನಾಲ್ವರು ಪಕ್ಷೇತರರ ಬೆಂಬಲ ಸೊರೇನ್ ಅವರಿಗಿದೆ. ಕನಿಷ್ಠ ಮೂವರು ಪಕ್ಷೇತರರ ಬೆಂಬಲಕ್ಕಾಗಿ ಜೆಎಂಎಂ ಲಾಬಿ ನಡೆಸುತ್ತಿದೆ.

ಯುಪಿಎ ನಾಯಕರನ್ನು ಭೇಟಿ ಮಾಡಿದ ಬಳಿಕ ಮಧುಕೋಡಾ ಶನಿವಾರ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪರ್ಯಾಯ ಸರಕಾರದ ನೇಮಕದ ತನಕ ಅವರು ಸ್ಥಾನದಲ್ಲಿ ಮುಂದುವರಿಯುವಂತೆ ರಾಜ್ಯಾಪಲರು ಕೋಡಾ ಆವರಿಗೆ ಸೂಚಿಸಿದ್ದಾರೆ.

ಆಗಸ್ಟ್ 17ರಂದು ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಜೆಎಂಎಂ ಹಿಂಪಡೆದ ಬಳಿಕ ಜಾರ್ಖಂಡ್ ಸರಕಾರ ಬಿಕ್ಕಟ್ಟಿಗೆ ಸಿಲುಕಿತ್ತು.
ಮತ್ತಷ್ಟು
ಹುರಿಯತ್ 'ಆಜಾದಿ' ಜಾಥಾ ಸಜ್ಜು; ಕಣಿವೆ ಉದ್ವಿಗ್ನ
ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ
ಜಾರ್ಖಂಡ್: ಮಧು ಕೋಡಾ ರಾಜೀನಾಮೆ
ಜಮ್ಮು: ಮೊದಲ ಸುತ್ತಿನ ಮಾತುಕತೆ