ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸಿಮಿ ಮುಖಂಡ ನಾಗೋರಿ ಅಹಮದಾಬಾದಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಮಿ ಮುಖಂಡ ನಾಗೋರಿ ಅಹಮದಾಬಾದಿಗೆ
ಮಧ್ಯಪ್ರದೇಶ ಜೈಲಿನಲ್ಲಿದ್ದ ಸಿಮಿ ಮುಖ್ಯಸ್ಥ ಸಫ್ದರ್ ನಾಗೋರಿಯನ್ನು, ಜುಲೈ 26ರ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಅಹಮದಾಬಾದಿಗೆ ಭಾನುವಾರ ರಾತ್ರಿ ಕರೆತರಲಾಗಿದೆ.

ನಾಗೋರಿಯನ್ನು ನಗರಕ್ಕೆ ಕರೆತರಲಾಗಿದೆ ಎಂದು ಹೇಳಿರುವ ಪೊಲೀಸ್ ಜಂಟಿ ಆಯುಕ್ತ ಅಶಿಶ್ ಭಾಟಿಯಾ ಆತನನ್ನು ಸೋಮವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಹೇಳಿದ್ದಾರೆ.

ನಾಗೋರಿಯನ್ನು ಮಧ್ಯಪ್ರದೇಶ ಪೊಲೀಸರಿಂದ ತಮ್ಮ ವಶಕ್ಕೆ ಪಡೆದಿದ್ದು, ಆತನನ್ನು ರಸ್ತೆ ಮೂಲಕ ಗುಜರಾತಿಗೆ ಕರೆತರಲಾಗಿದೆ ಎಂದು ಭಾಟಿಯಾ ತಿಳಿಸಿದ್ದಾರೆ.

ನಾಗೋರಿಯನ್ನು 2008ರ ಮಾರ್ಚ್‌ನಲ್ಲಿ ಇಂಧೋರಿನಲ್ಲಿ ಬಂಧಿಸಲಾಗಿದ್ದು, ಜುಲೈ26ರಂದು ಅಹಮದಾಬಾದಿನಲ್ಲಿ ನಡೆಸಲಾಗಿರುವ ಸರಣಿ ಸ್ಫೋಟಗಳ ಪ್ರಮುಖ ರೂವಾರಿ ಈತ ಎಂದು ಶಂಕಿಸಲಾಗಿದೆ. 55 ಜನರ ಮಾರಣ ಹೋಮಕ್ಕೆ ಕಾರಣವಾಗಿರುವ ಸ್ಫೋಟದ ಕುರಿತು ಹೆಚ್ಚಿನ ಮಾಹಿತಿ, ಸಂಪರ್ಕಗಳು ಮತ್ತು ಇದರಲ್ಲಿ ಒಳಗೊಂಡಿರುವ ಇತರ ವ್ಯಕ್ತಿಗಳ ಪತ್ತೆಗಾಗಿ ಆತನನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಭಾಟಿಯಾ ಹೇಳಿದ್ದಾರೆ.

ಇತರ ನಾಲ್ವರು ಸಿಮಿ ಕಾರ್ಯಕರ್ತರಾದ, ಕಮ್ರುದ್ದಿನ್ ನಾಗೋರಿ, ಅಮಿಲ್ ಪರ್ವೇಜ್, ಆಸಿಫ್ ಹುಸೇನ್, ಅಬ್ದುಲ್ ಸಿಬ್ಲಿ ಅವರನ್ನೂ ವಶಪಡಿಸಿಕೊಳ್ಳಲಾಗಿದ್ದು, ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಲಾಗಿದ್ದು, ಇವರನ್ನು ಸೆಪ್ಟಂಬರ್ 3ರ ತನಕ ಪೊಲೀಸರ ವಶಕ್ಕೆ ನೀಡಲಾಗಿದೆ.

ಈ ಐವರು ಶಂಕಿತರು ಕೇರಳದಲ್ಲಿ ಡಿಸೆಂಬರ್ 2007ರಲ್ಲಿ ನಡೆದ ಮತ್ತು ಹಲೋಲ್‌ನಲ್ಲಿ 2008ರ ಜನವರಿಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಹಾಜರಿದ್ದರೆಂದು ಶಂಕಿಸಲಾಗಿದೆ. ಇಲ್ಲಿ ಇತರ ಸಿಮಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ.
ಮತ್ತಷ್ಟು
ಸರಕಾರ ರಚಿಸಲು ಇಂದು ಶಿಬು ಹಕ್ಕು ಮಂಡನೆ
ಹುರಿಯತ್ 'ಆಜಾದಿ' ಜಾಥಾ ಸಜ್ಜು; ಕಣಿವೆ ಉದ್ವಿಗ್ನ
ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ
ಕಾಶ್ಮೀರದಲ್ಲಿ ಅನಿರ್ದಿಷ್ಟಾವಧಿ ನಿಷೇಧಾಜ್ಞೆ
ಜಾರ್ಖಂಡ್: ಮಧು ಕೋಡಾ ರಾಜೀನಾಮೆ