ಬಂಟಿ ಗ್ಯಾಂಗಿನ ಕಿಂಗ್‌ಪಿನ್ ಬಂಟಿಯನ್ನು ಸೋಮವಾರ ಮುಂಜಾನೆ ನಡೆಸಿದ ಕಾರ್ಯಾಚರಣೆಯೊಂದರಲ್ಲಿ, ದೆಹಲಿ ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. ಈತ ಕಳೆದ ಕೆಲವು ತಿಂಗಳಲ್ಲಿ ಹಲವಾರು ಕೊಲೆ ಪ್ರಕರಣದಲ್ಲಿ ಪಾಲ್ಗೊಂಡಿದ್ದು, ಪೊಲೀಸರಿಗೆ ಜರೂರು ಬೇಕಾದವನಾಗಿದ್ದ.
ದಕ್ಷಿಣ ದೆಹಲಿಯ ಬದರಾಪುರ ಪ್ರದೇಶದಲ್ಲಿ ಬಂಟಿ, ತನ್ನ ಸಹಚರ ರಾಜೇಶ ಎಂಬಾತನೊಂದಿಗೆ ಪೊಲೀಸರೊಂದಿಗೆ ಗುಂಡಿನ ಚಕಮಕಿ ನಡೆಸಿದ್ದು, ಈ ಇಬ್ಬರೂ ಗುಂಡಿಗಾಗುತಿಯಾಗಿದ್ದಾರೆ.
ಈತ ಅಡಗಿಕೊಂಡಿದ್ದ ಸ್ಥಳದ ಖಚಿತಮಾಹಿತಿ ಹೊಂದಿದ್ದ ಪೊಲೀಸರು, ನಸುಕಿನ 5.30ರ ವೇಳೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ಇವರಿಗೆ ಶರಣಾಗುವಂತೆ ತಿಳಿಸದರೂ, ಪೊಲೀಸರನ್ನು ಕಂಡ ಪಾತಕಿಗಳು ಪೊಲೀಸರತ್ತ ಗುಂಡು ಹಾರಿಸಲಾರಂಭಿಸಿದ್ದು, ಪ್ರತಿಯಾಗಿ ಪೊಲೀಸರೂ ಗುಂಡುಹಾರಿಸಿ ನಡೆದ ಗುಂಡಿನ ಚಕಮಕಿಯಲ್ಲಿ ಈ ಇಬ್ಬರು ಹತರಾಗಿದ್ದಾರಲ್ಲದೆ, ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಐದು ಸದಸ್ಯರ ಬಂಟಿ ಗ್ಯಾಂಗಿನ ಇತರ ಮೂರು ಮಂದಿಯನ್ನು ಈ ತಿಂಗಳ ಆದಿಯಲ್ಲಿ ಬಂಧಿಸಲಾಗಿತ್ತು.
|