ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಒರಿಸ್ಸಾ: ವಿಹಿಂಪ ನಾಯಕನ ಕೊಲೆ ಖಂಡಿಸಿ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒರಿಸ್ಸಾ: ವಿಹಿಂಪ ನಾಯಕನ ಕೊಲೆ ಖಂಡಿಸಿ ಪ್ರತಿಭಟನೆ
ವಿಶ್ವಹಿಂದೂ ಪರಿಷತ್ ನಾಯಕ ಮತ್ತು ಇತರ ಐದು ಮಂದಿಯ ಕಗ್ಗೊಲೆಯನ್ನು ಪ್ರತಿಭಟಿಸಿ ಸೊಮವಾರ ಒರಿಸ್ಸಾದ್ಯಂತ ಬಿಜೆಪಿ ಮತ್ತು ಸಂಘ ಪರಿವಾರಗಳು ಪ್ರತಿಭಟನೆ ನಡೆಸುತ್ತಿವೆ.

ಫುಲ್ಬಾನಿ, ಬಾಲಿಗುಡ ಮತ್ತು ಉದಯಗಿರಿಗಳಲ್ಲಿ ಬಂದ್ ಸೋಮವಾರ ಸಾಯಂಕಾಲ ಏಳು ಗಂಟೆಯಿಂದ ಮಂಗಳವಾರ ಮುಂಜಾನೆ ಎಂಟು ಗಂಟೆಯ ತನಕ ಮುಂದುವರಿಯಲಿದೆ. ಏತನ್ಮಧ್ಯೆ, ಕಂಧಮಲ್ ಜಿಲ್ಲಾಡಳಿತವು ಈ ಮೂರು ಪಟ್ಟಣಗಳಲ್ಲಿ ಸೋಮವಾರ ಸಾಯಂಕಾಲ ಕರ್ಫ್ಯೂ ಹೇರಿದೆ. ಈ ಪಟ್ಟಣಗಳಲ್ಲಿ ಕೊಲೆಗೀಡಾಗಿರುವ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಮೃತದೇಹದ ಮೆರವಣಿಗೆ ನಡೆಸುವುದಾಗಿ ಸಂಘಪರಿವಾರ ಹೇಳಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಹೇರಲಾಗಿದೆ.

ಮತಾಂತರ ವಿರೋಧಿಸಿ ಬುಡಕಟ್ಟು ಪ್ರದೇಶದಲ್ಲಿ ಕಾರ್ಯವೆಸಗುತ್ತಿದ್ದ, 85ರ ಹರೆಯದ ಲಕ್ಷ್ಮಣಾನಂದ ಸರಸ್ವತಿ ಹಾಗೂ ಇತರರನ್ನು ತುಮುಡಿಬಂದ್ ಕ್ಷೇತ್ರದ ಜಲಸ್ಪೇಟದಲ್ಲಿರುವ ಬಾಲಕಿಯರ ಆಶ್ರಮದಲ್ಲಿ ಶನಿವಾರ ರಾತ್ರಿ ಗುಂಡಿಟ್ಟು ಕೊಲ್ಲಲಾಗಿದೆ.

ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಈ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಮತ್ತು ಕರ್ತವ್ಯದ ನಿರ್ಲಕ್ಷ್ಯಕ್ಕಾಗಿ ಕಂಧಮಲ್ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತ್ತುಗೊಳಿಸಿದ್ದಾರೆ.

ಸ್ವಾಮಿ ಹಾಗೂ ಜಲಸ್ಪೆಟ ಆಶ್ರಮಕ್ಕೆ ಸೂಕ್ತ ಭದ್ರೆತೆ ನೀಡುವಲ್ಲಿ ಪೊಲೀಸರು ವಿಫಲಾಗಿದ್ದಾರೆ ಎಂದು ಸಂಘಪರಿವಾರ ದೂರಿದೆ.
ಮತ್ತಷ್ಟು
ಬಂಟಿ ಗ್ಯಾಂಗ್ ಕಿಂಗ್‌ಪಿನ್ ಗುಂಡಿಗೆ ಬಲಿ
ಸಿಮಿ ಮುಖಂಡ ನಾಗೋರಿ ಅಹಮದಾಬಾದಿಗೆ
ಸರಕಾರ ರಚಿಸಲು ಇಂದು ಶಿಬು ಹಕ್ಕು ಮಂಡನೆ
ಹುರಿಯತ್ 'ಆಜಾದಿ' ಜಾಥಾ ಸಜ್ಜು; ಕಣಿವೆ ಉದ್ವಿಗ್ನ
ಟಾಟಾ ನಿರ್ಗಮನ ಬೇಡ, ಭೂಮಿ ಮರಳಿಸಿ-ಮಮತಾ
ಮಮತಾ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ