ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಕಾಶ್ಮೀರ: ಭದ್ರತಾ ಪಡೆಗಳೊಂದಿಗೆ ಘರ್ಷಣೆ, 3 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರ: ಭದ್ರತಾ ಪಡೆಗಳೊಂದಿಗೆ ಘರ್ಷಣೆ, 3 ಸಾವು
ಕಾಶ್ಮೀರಾದ್ಯಂತ ಹೇರಿರುವ ಕರ್ಫ್ಯೂವನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಜಾಥಾ ಹಮ್ಮಿಕೊಂಡಿದ್ದು, ಗುಂಪು ಚದುರಿಸಲು ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮ ಕನಿಷ್ಠ ಮೂರು ಮಂದಿ ಹತರಾಗಿದ್ದು, ಗಾಯಾಳುಗಳ ಸಂಖ್ಯೆ 70ಕ್ಕೇರಿದೆ.

ಪ್ರತಿಭಟನಾಕಾರರು ಭದ್ರತಾ ಪಡೆಗಳತ್ತ ಕಲ್ಲು ತೂರಾಟದಲ್ಲಿ ನಿರತರಾಗಿದ್ದ ವೇಳೆ ಗುಂಡು ಹಾರಾಟ ನಡೆಸಿದ್ದು ಈ ವೇಳೆ ಶೌಕತ್ ಅಹ್ಮದ್ ಖಾಂಡೆ ಎಂಬಾತ ಗುಂಡೇಟಿನಿಂದ ಮೃತನಾಗಿದ್ದು ಇನ್ನೋರ್ವ ಯುವಕ ಗಂಭೀರ ಗಾಯಗೊಂಡಿದ್ದಾನೆ.

ಪ್ರತ್ಯೇಕತಾವಾದಿಗಳ ಜಾಥಾವನ್ನು ತಡೆಯಲು ಕಾಶ್ಮೀರದ ಎಲ್ಲಾ ಹತ್ತು ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಲಾಗಿದ್ದರೂ, ಪ್ರತಿಭಟನಾಕಾರರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ. ಭಾನುವಾರದಿಂದೀಚೆ ಭದ್ರತಾಪಡೆಗಳ ಗುಂಡಿಗೆ ಒಟ್ಟು ಇಬ್ಬರು ಹತರಾಗಿದ್ದು 105 ಮಂದಿ ಗಾಯಗೊಂಡಿದ್ದಾರೆ.

ಜಮ್ಮು ಕಾಶ್ಮೀರದ ಬಂಡಿಪುರದ ಹಜನ್ ಎಂಬಲ್ಲಿ ಸಂಭವಿಸಿರುವ ಘರ್ಷಣೆಯಲ್ಲಿ ಕನಿಷ್ಠ 24 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳೂ ಸೇರಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಸಿಮಿ ನಿಷೇಧ ಆರು ವಾರ ವಿಸ್ತರಣೆ
'ಮೆಗಾಸ್ಟಾರ್' ರಾಜಕೀಯ ಪ್ರವೇಶಕ್ಕೆ ರಂಗಸಜ್ಜು
ಒರಿಸ್ಸಾ: ವಿಹಿಂಪ ನಾಯಕನ ಕೊಲೆ ಖಂಡಿಸಿ ಪ್ರತಿಭಟನೆ
ಬಂಟಿ ಗ್ಯಾಂಗ್ ಕಿಂಗ್‌ಪಿನ್ ಗುಂಡಿಗೆ ಬಲಿ
ಸಿಮಿ ಮುಖಂಡ ನಾಗೋರಿ ಅಹಮದಾಬಾದಿಗೆ
ಸರಕಾರ ರಚಿಸಲು ಇಂದು ಶಿಬು ಹಕ್ಕು ಮಂಡನೆ