ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜಾರ್ಖಂಡ್: ಸರಕಾರ ರಚನೆಗಾಗಿ ಶಿಬುಗೆ ಆಹ್ವಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಾರ್ಖಂಡ್: ಸರಕಾರ ರಚನೆಗಾಗಿ ಶಿಬುಗೆ ಆಹ್ವಾನ
PTI
ಜಾರ್ಖಂಡ್ ಮುಖ್ಯಮಂತ್ರಿ ಗದ್ದುಗೆಗೆ ಮತ್ತೆ ಏರಲೇಬೇಕೆಂಬ ಹಠ ಸಾಧನೆ ಮಾಡಿರುವ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರನ್ನು ಸರಕಾರ ರಚನೆಗಾಗಿ ರಾಜ್ಯಪಾಲ ಸಯೀದ್ ಸಿಬ್ಟಿ ರಾಝಿ ಆಹ್ವಾನಿಸುವುದರೊಂದಿಗೆ ಅವರ ಕನಸು ನನಸಾಗುವತ್ತ ಸಾಗಿದೆ.

ಶಿಬು ಅವರು ಯಾವಾಗ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಕುರಿತು ನಿರ್ಧಾರ ಕೈಗೊಳ್ಳದಿದ್ದರೂ, ಸೆಪ್ಟಂಬರ್ ಒಂದು ಅಥವಾ ಅದರೊಳಗಾಗಿ ಬಹುಮತ ಸಾಬೀತು ಪಡಿಸಬೇಕು ಎಂದು ರಾಜ್ಯಪಾಲರು ಹೇಳಿರುವುದಾಗಿ ರಾಜಭವನದ ಮೂಲಗಳು ತಿಳಿಸಿವೆ.

ನಿರ್ಗಮನ ಮುಖ್ಯಮಂತ್ರಿ ಮಧುಕೋಡ ಸೇರಿದಂತೆ ನಾಲ್ವರು ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಗಳಿಸಿದ ತಕ್ಷಣ ಶಿಬು ಅವರು ಸರಕಾರ ರಚನೆಯ ಹಕ್ಕು ಮಂಡಿಸಿದ್ದು, ಪರಿಣಾಮ ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನ ನೀಡಿದ್ದಾರೆ.

ಶಿಬು ಸರಕಾರ ರಚನೆಯ ಹಕ್ಕು ಮಂಡಿಸುವ ವೇಳೆಗೆ ಕಾಂಗ್ರೆಸ್ ನಾಯಕ ಸುಭೋದ್ ಕಾಂತ್ ಸಹಾಯ್, ಮಧುಕೋಡ, ನಿರ್ಗಮನ ಉಪ ಮುಖ್ಯಮಂತ್ರಿ ಸ್ಟೀಫನ್ ಮರಾಂಡಿ ಹಾಗೂ ಮತ್ತಿತರರು ರಾಜಭವನದಲ್ಲಿ ಉಪಸ್ಥಿತರಿದ್ದರು.

ತಾನು 42 ಮಂದಿ ಶಾಸಕರು ಸಹಿ ಮಾಡಿರುವ ಪಟ್ಟಿಯನ್ನು ಸಲ್ಲಿಸಿರುವುದಾಗಿ ಶಿಬು ಹೇಳಿದ್ದಾರೆ.

ಶಿಬು ಅವರಿಗಿರುವ ಸಂಖ್ಯಾಬಲದ ವಿವರ ಇಂತಿದೆ
ಜಾರ್ಖಂಡ್ ಮುಕ್ತಿ ಮೋರ್ಚಾ 17
ಕಾಂಗ್ರೆಸ್ 9
ರಾಷ್ಟ್ರೀಯ ಜನತಾದಳ 7
ಸಂಯುಕ್ತ ಗೋವಾ ಪ್ರಜಾತಾಂತ್ರಿಕ ಪಕ್ಷ 2
ಜಾರ್ಖಂಡ್ ಪಕ್ಷ 1
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 1
ಫಾರ್ವರ್ಡ್ ಬ್ಲಾಕ್ 1
ಪಕ್ಷೇತರರು 4 (ಮಧು ಕೋಡಾ, ಸ್ಟೀಫನ್ ಮರಾಂಡಿ, ಹರಿನಾರಾಯಣ್ ರಾಯ್, ಭಾನು ಪ್ರತಾಪ್ ಸಾಹಿ)
ಮತ್ತಷ್ಟು
ಒರಿಸ್ಸಾ: ಕ್ರೈಸ್ತ ಸನ್ಯಾಸಿನಿ ಜೀವಂತ ದಹನ
ಶಿಬು ಸೊರೇನ್‌ಗೆ ಕೋಡಾ ಬೆಂಬಲ
ಕಾಶ್ಮೀರ: ಭದ್ರತಾ ಪಡೆಗಳೊಂದಿಗೆ ಘರ್ಷಣೆ, 3 ಸಾವು
ಸಿಮಿ ನಿಷೇಧ ಆರು ವಾರ ವಿಸ್ತರಣೆ
'ಮೆಗಾಸ್ಟಾರ್' ರಾಜಕೀಯ ಪ್ರವೇಶಕ್ಕೆ ರಂಗಸಜ್ಜು
ಒರಿಸ್ಸಾ: ವಿಹಿಂಪ ನಾಯಕನ ಕೊಲೆ ಖಂಡಿಸಿ ಪ್ರತಿಭಟನೆ