ಅಮರನಾಥ ಸಂಘರ್ಷ ಸಮಿತಿಯು, ಸರಕಾರ ನೇಮಿಸಿರುವ ಸಮಿತಿಯೊಂದಿಗೆ ಮಂಗಳವಾರ ನಿಗದಿಯಾಗಿದ್ದ ನಾಲ್ಕನೆ ಸುತ್ತಿನ ಮಾತುಕತೆಯಿಂದ ಹಿಂತೆಗೆದಿದೆ. ಅಮರನಾಥ ಮಂದಿರ ಮಂಡಳಿಗೆ ವಿವಾದಿತ ಭೂಮಿಯನ್ನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸುತ್ತಿದೆ.
ಐಜಿಪಿ ಮತ್ತು ಹೊಸದಾಗಿ ನೇಮಿಸಲಾಗಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯನ್ನು ತೆಗೆದು ಹಾಕುವ ತನಕ ಮಾತುಕತೆಗೆ ಮುಂದಾಗುವುದಿಲ್ಲ ಎಂದು ಸಂಘರ್ಷ ಸಮಿತಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಮಿತಿಯು ಜಮ್ಮುವಿನಲ್ಲಿ ನೀಡಲಾಗಿರುವ ಬಂದ್ ಕರೆಯನ್ನು ಭಾನುವಾರದ ತನಕ ಮುಂದುವರಿಸಿದ್ದು, ಭೂವಿವಾದ ಪರಿಹಾರವಾಗುವ ತನಕ ಬಂದ್ ಮುಂದುವರಿಸಿರುವುದಾಗಿ ಹೇಳಿದೆ.
|