ಜಮ್ಮು: ಕಾಶ್ಮೀರ ಬಿಕ್ಕಟ್ಟಿನ ಅನುಕೂಲ ಪಡೆದುಕೊಂಡಿರುವ ಅಕ್ರಮ ನುಸುಳುವಿಕೆದಾರರು ಜಮ್ಮು ಕಾಶ್ಮೀರದ ಗಡಿನಿಯಂತ್ರಣ ರೇಖೆಯ ಕಾನಾ ಚಾಕ್ ವಲಯದಲ್ಲಿ ಮಂಗಳವಾರ ಮುಂಜಾನೆ ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದಾರೆಂದು ಗಡಿ ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳ ಗಮನ ಬೇರೆಡೆಗೆ ಸೆಳೆಯಲು ಗುಂಡು ಹಾರಿಸಿದ ಅಕ್ರಮ ನುಸುಳುವಿಕೆದಾರರು ತಂತಿ ಬೇಲಿಯನ್ನು ಕತ್ತರಿಸಿ ರಾಷ್ಟ್ರದೊಳಕ್ಕೆ ನುಸುಳಿದ್ದಾರೆ.
ಸಶಸ್ತ್ರಧಾರಿಗಳಾಗಿದ್ದ ಗುಂಪು ತಂತಿ ಬೇಲಿ ಕತ್ತರಿಸಿ ಭಾರತದ ಪ್ರಾಂತ್ಯದೊಳಕ್ಕೆ ನುಸುಳಿದ್ದು, ಅವರು ಜಮ್ಮುವಿನತ್ತ ಸಾಗಿದ್ದು, ಅವರ ಪತ್ತೆಗೆ ಭಾರೀ ಶೋಧನಾ ಕಾರ್ಯ ಆರಂಭಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|