ಗೋಧ್ರಾ ಪ್ರಕರಣದ ತನಿಖೆ ನಡೆಸುತ್ತಿರುವ ಆರ್.ಕೆ.ರಾಘವನ್ ಸಮಿತಿಗೆ, ತನಿಖೆಯನ್ನು ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ಡಿಸೆಂಬರ್ 31ರ ತನಕ ಸಮಯಾವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್, ಪಿ ಸದಾಶಿವನ್ ಮತ್ತು ಅಫ್ತಾಬ್ ಅಲಮ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆಯನ್ನು ಡಿಸೆಂಬರ್ 31ರ ತನಕ ಮುಂದೂಡಿದೆ.
2002ರಲ್ಲಿ ಆಯೋಧ್ಯೆಯಿಂದ ಮರಳುತ್ತಿದ್ದ 52 ಕರಸೇವಕರು ಪ್ರಯಾಣಿಸುತ್ತಿದ್ದ ರೈಲಿಗೆ ಗೋಧ್ರಾದಲ್ಲಿ ಬೆಂಕಿಹಚ್ಚಲಾಗಿದ್ದು, ಎಸ್6 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ಜೀವಂತ ದಹನವಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ 100ಕ್ಕೂ ಹೆಚ್ಚುಮಂದಿ ಆರೋಪಿತರು ಜೈಲಿನಲ್ಲಿದ್ದಾರೆ.
ರೈಲಿಗೆ ಬೆಂಕಿಹಚ್ಚಿದ ಈ ಪ್ರಕರಣವು ಗುಜರಾತಿನಲ್ಲಿ ಕೋಮು ಹಿಂಸಾಚಾರಕ್ಕೆ ನಾಂದಿಯಾಗಿತ್ತು.
ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ರಾಘವನ್ ಸಮಿತಿಯು ಈಗಾಲೇ ಮಧ್ಯಂತರ ವರದಿ ಸಲ್ಲಿಸಿದೆ.
|