ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ರಾಹುಲ್ ಸಭೆಗೆ ಮಾಯಾ ಸರಕಾರ ಅಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಹುಲ್ ಸಭೆಗೆ ಮಾಯಾ ಸರಕಾರ ಅಡ್ಡಿ
PTI
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಭಾಷಣ ಮಾಡಲಿರುವ ಉದ್ದೇಶಿತ ಅಲಹಾಬಾದ್‌ ಸಾರ್ವಜನಿಕ ಕಾಂಗ್ರೆಸ್ ಸಮಾವೇಶಕ್ಕೆ ತಯಾರಿ ನಡೆಸಲು ಮಾಯಾವತಿ ಸರಕಾರ ಅಡ್ಡಿಯುಂಟುಮಾಡುತ್ತಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಆರೋಪಿಸಿದೆ.

ಅವರು ಸಭೆಯನ್ನು ಅಲಹಾಬಾದ್‌ನ ಹೊರಗಡೆ ಮಾಡುವಂತೆ ಪ್ರೇರೇಪಿಸಲು ಅನೇಕ ಉಪಾಯಗಳನ್ನು ಹೂಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರ ಉತ್ಸಾಹ ಕುಂಠಿತಗೊಳಿಸಲು ವ್ಯರ್ಥ ಕಸರತ್ತು ನಡೆಸುತ್ತಿದ್ದಾರೆ ಎಂದು ಪಕ್ಷದ ರಾಜ್ಯಾಧ್ಯಕ್ಷೆ ರೀತಾ ಬಹುಗುಣ ಜೋಶಿ ವರದಿಗಾರರಿಗೆ ತಿಳಿಸಿದ್ದಾರೆ.

ಅಮೇಥಿಯ ಲೋಕಸಭಾ ಸದಸ್ಯರೂ ಆಗಿರುವ ರಾಹುಲ್ ಅಲಹಾಬಾದ್‌ನಲ್ಲಿ ಅಗಸ್ಟ್ 28 ರಂದು ನಡೆಯಲಿರುವ ಮುಂದಿನ ಉತ್ತರ ಪ್ರದೇಶ ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ನಂತರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಸಿ ಮಾತನಾಡಲಿದ್ದಾರೆ.

ಮುಂದಿನ ಲೋಕ ಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಯುಪಿ ಸಮನ್ವಯ ಸಮಿತಿಯನ್ನು ಕಳೆದ ವರ್ಷವಷ್ಟೇ ರೂಪಿಸಲಾಗಿದೆ.

"ಆರಂಭದಲ್ಲಿ ನಮಗೆ ಪಿಜಿ ಟಂಡನ್‌ ಹಾಲ್‌ನಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸುವ ಉದ್ದೇಶವಿತ್ತು. ಆದರೆ, ಇದು ಜನದಟ್ಟಣೆಯ ಪ್ರದೇಶವಾಗಿರುವ ಕಾರಣ ಸಾರ್ವಜನಿಕ ಸಭೆಗೆ ಸೂಕ್ತ ಸ್ಥಳವಲ್ಲ ಎಂಬ ಕಾರಣ ನೀಡಿತ್ತು. ಹಾಗಾಗಿ ಅವರು ತೊಂದರೆಯನ್ನುಂಟುಮಾಡಲು ಕ್ಷುಲ್ಲಕ ಕಾರಣಗಳನ್ನು ನೀಡುತ್ತಿದ್ದಾರೆ" ಎಂದು ಅವರು ಆರೋಪಿಸಿದರು.

ಯುಪಿಸಿಸಿಯು ಈಗ ಸಭಾಂಗಣವನ್ನು ಅಲಹಾಬಾದ್‌ನ ಹೊರವಲಯದಲ್ಲಿರುವ ಕೆಪಿ ಅಂಗಣಕ್ಕೆ ಬದಲಾವಣೆ ಮಾಡುವತ್ತ ಯೋಜನೆ ರೂಪಿಸುತ್ತಿದೆ. "ರಾಹುಲ್ ಗಾಂಧಿಯವರಿಗೆ ಸಭಾಂಗಣ ಯಾವುದೆಂಬುದು ಪ್ರಶ್ನೆಯೇ ಅಲ್ಲ. ಎಲ್ಲಿಯೇ ಆದರೂ ತನ್ನ ಬೆಂಬಲಿಗರನ್ನು ತನ್ನತ್ತ ಸೆಳೆಯಲು ಶಕ್ತರಾಗಿದ್ದಾರೆ" ಎಂದು ಅವರು ಸಮರ್ಥಿಸಿದರು.

ಯಾನಿವರ್ಸಿಟಿ ಚುನಾವಣೆಯಲ್ಲಿ ವಿಳಂಬ ಧೋರಣೆಯನ್ನು ಪ್ರತಿಭಟಿಸಿದ ಪಕ್ಷದ ವಿದ್ಯಾರ್ಥಿ ಸಂಘ ಎನ್ಎಸ್‌ಯುಐಯ ಕಾರ್ಯಕರ್ತರನ್ನು ಪೋಲೀಸರು ವಿವಿಧ ಐಪಿಸಿ ಸೆಕ್ಷನ್‌ನ ಅನ್ವಯದಡಿಯಲ್ಲಿ ಬಂಧಿಸಿದ್ದಾರೆಂದು ಜೋಶಿ ಇದೇ ವೇಳೆ ತಿಳಿಸಿದರು.

"ಅವರು ಸಮಾರಂಭಕ್ಕೆ ಅಡ್ಡಗಾಲು ಹಾಕುವಂತಹ ಅನೇಕ ಉಪಾಯಗಳನ್ನು ಮಾಡುತ್ತಿದ್ದಾರೆ.ಆದರೆ ಇದೆಲ್ಲ ರಾಹುಲ್ ಗಾಂಧಿ ನಗರಕ್ಕೆ ಬರದಂತೆ ತಡೆಯಲಿರುವ ಅವರ ಉಪಾಯಗಳೆಂದು ನಾವು ಸುಮ್ಮನಿದ್ದೇವೆ."ಎಂದು ಅವರು ವಿವರಿಸಿದರು.
ಮತ್ತಷ್ಟು
ಗಡಿಯಲ್ಲಿ ನುಸುಳುವಿಕೆ, ಗುಂಡುಹಾರಾಟ ಕಳವಳಕಾರಿ: ಆಂಟನಿ
ಗೋಧ್ರಾ ತನಿಖಾ ಸಮಿತಿ ವರದಿ ಸಲ್ಲಿಕೆಗೆ ಡಿ.31ರ ಗಡು
ಒರಿಸ್ಸಾದಲ್ಲಿ ಮತ್ತೆ ಕೋಮು ಹಿಂಸಾಚಾರ
ಬಿಹಾರವನ್ನು ಧ್ವಂಸಗೊಳಿಸುತ್ತಿರುವ ಕೋಸಿ; 2 ಮಿಲಿಯ ನಿರಾಶ್ರಿತರು
ಗಡಿನಿಯಂತ್ರಣ ರೇಖೆಯಲ್ಲಿ ಅಕ್ರಮ ನುಸುಳುವಿಕೆ
ಜಮ್ಮು: ಮಾತುಕತೆಯಿಂದ ಹಿಂತೆಗೆದ ಸಂಘರ್ಷ ಸಮಿತಿ