ತೆಲುಗು ಚಿತ್ರರಂಗದ ಮೆಗಾಸ್ಟಾರ್,ಪದ್ಮಭೂಷಣ ಪ್ರಶಸ್ತಿ ವಿಜೇತ ನಟ, ಚಿರಂಜೀವಿ ರಾಜಕೀಯ ಪಕ್ಷದ ಅಧಿಕೃತ ಘೋಷಣೆಗಾಗಿ ಸೋಮವಾರ ಸಂಜೆ ತಿರುಪತಿಯ ರಾಜೀವ್ ನಗರ ಜನಸಾಗರದಿಂದ ತುಂಬಿದ್ದು, ಕಾರ್ಯಕ್ರಮದಲ್ಲಿನ ಪ್ರಮುಖ ಅಂಶಗಳು.
ಸಮಾರಂಭದಲ್ಲಿ 5ಲಕ್ಷಕ್ಕೂ ಅಧಿಕ ಚಿರಂಜೀವಿ ಅಭಿಮಾನಿಗಳ ಜನಸ್ತೋಮ
ವೀಕ್ಷಣೆಗೆ 70 ಎಲ್‌ಸಿಡಿ ಮಾನೀಟರ್ ವ್ಯವಸ್ಥೆ
ತುರ್ತು ಚಿಕಿತ್ಸೆಗೆ 9 ಆಂಬ್ಯುಲೆನ್ಸ್
ವೇದಿಕೆ ಮೇಲೆ 23 ಗಣ್ಯರಿಗೆ ಅವಕಾಶ
ಸಮಾವೇಶದಲ್ಲಿ ಚಿರಂಜೀವಿ ಕಟೌಟ್‌ಗಳ ಅಬ್ಬರ
120 ಅಡಿ ಎತ್ತರದ ಕ್ರೇನ್ ಕ್ಯಾಮರಾ ಬಳಕೆ
ರೈಲಿನಲ್ಲಿಯೇ 60 ಸಾವಿರ ಅಭಿಮಾನಿಗಳ ಆಗಮನ
ಮಹಿಳೆಯರು, ಅಂಗವಿಕಲರಿಗೆ ಪ್ರತ್ಯೇಕ ಆಸನ ವ್ಯವಸ್ಥೆ
ವಿಶೇಷ ಹೆಲಿಕ್ಯಾಪ್ಟರ್‌ನಿಂದ ಹೂ ಮಳೆ
8 ಅಡಿ ಎತ್ತರದ ವೇದಿಕೆ ನಿರ್ಮಾಣ
ಪ್ರತಿವಿಭಾಗದಲ್ಲೂ ಕುಡಿಯುವ ನೀರಿನ ವ್ಯವಸ್ಥೆ
ಬಸ್ ವ್ಯವಸ್ಥೆಗಾಗಿ 1 ಕೋಟಿ 32ಲಕ್ಷ ಖರ್ಚು
ಭದ್ರತೆಗಾಗಿ 3 ಸಾವಿರ ಪೊಲೀಸರ ನಿಯುಕ್ತಿ
6.30 ಕ್ಕೆ ಪಕ್ಷದ ಧ್ವಜ ಅನಾವರಣ
|