ಜಮ್ಮು ಸಮೀಪದ ಮಿಶ್ರಿವಾಲ ಪ್ರದೇಶದಲ್ಲಿ ಮೂವರು ಉಗ್ರರು ಯದ್ವಾತದ್ವಾ ಗುಂಡುಹಾರಿಸಿದ ಪರಿಣಾಮ ಓರ್ವ ಸೇನಾಧಿಕಾರಿ ಹಾಗೂ ಇತರ ನಾಲ್ವರು ನಾಗರಿಕರು ಹತರಾಗಿದ್ದು, ಜಮ್ಮುವಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಆಟೋ ರಿಕ್ಷಾಒಂದರ ಚಾಲಕನನ್ನು ಕೊಲೆಗೈದು ಉಗ್ರರು ಆ ರಿಕ್ಷಾದಲ್ಲಿ ಒಡಾಡುತ್ತಿದ್ದರು ಎಂದು ವರದಿಗಳು ಹೇಳಿವೆ.
ಉಗ್ರರು ಚಿನ್ನೂರಿನತ್ತ ರಿಕ್ಷಾದಲ್ಲಿ ತೆರಳಿದ್ದು, ಅಲ್ಲಿನ ಮನೆಯೊಂದರಲ್ಲಿ ಅವಿತುಕೊಂಡಿದ್ದಾರೆ ಹೇಳಲಾಗಿದೆ.
ಈ ಉಗ್ರರು ಕನಚಾಕ್ ಗಡಿನಿಯಂತ್ರಣ ರೇಖೆಯಲ್ಲಿ ಮಂಗಳವಾರ ಅಕ್ರಮವಾಗಿ ನುಸುಳಿದವರೆಂದು ಮೂಲಗಳು ಹೇಳಿವೆ.
ಗುಂಡು ಹಾರಟ ನಡೆಸಿ ಭದ್ರತಾ ಸಿಬ್ಬಂದಿಗಳ ಗಮನ ಬೇರೆಡೆ ಸೆಳೆದ ಉಗ್ರರು ಪಾಕಿಸ್ತಾನ ಪ್ರಾಂತ್ಯದಿಂದ ಗಡಿನಿಯಂತ್ರಣ ರೇಖೆ ಮೂಲಕ ಮಂಗಳವಾರ ನಸುಕಿನಲ್ಲಿ ಭಾರತ ಪ್ರದೇಶಕ್ಕೆ ನುಸುಳಿದ್ದರು.
|