ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಬಂಧಿತರ ವಿರುದ್ಧ ಬಿಗಿ ಕ್ರಮ: ಕ್ರೈಮ್ ಬ್ರ್ಯಾಂಚ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಧಿತರ ವಿರುದ್ಧ ಬಿಗಿ ಕ್ರಮ: ಕ್ರೈಮ್ ಬ್ರ್ಯಾಂಚ್
ಅಹಮದಾಬಾದ್ ಸರಣಿ ಬಾಂಬ್‌ಸ್ಫೋಟದ ರೂವಾರಿ ಸೇರಿದಂತೆ ಬಂಧನಕ್ಕೀಡಾಗಿರುವ 10 ಸಿಮಿ ಕಾರ್ಯಕರ್ತರ ವಿರುದ್ಧ ಬಿಗಿ ಪ್ರಕರಣವನ್ನು ದಾಖಲಿಸಲು ಅಪರಾಧ ವಿಭಾಗದ ಅಧಿಕಾರಿಗಳು ಸಂಪೂರ್ಣ ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಿಮಿ ಸಂಘಟನೆಯ ಕಾರ್ಯಕರ್ತರ ಬಂಧನದ ನಂತರ ನ್ಯಾಯಾಲಯದಲ್ಲಿ ಆರೋಪವನ್ನು ಸಾಬೀತುಪಡಿಸಲು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಪರಾಧ ವಿಭಾಗದ ಜಂಟಿ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.

ಸಿಮಿ ಸಂಘಟನೆಯ 10 ಮಂದಿ ಬಂಧಿತ ಕಾರ್ಯಕರ್ತರ ವಿರುದ್ದದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದ್ದು ನ್ಯಾಯಾಲಯದಲ್ಲಿ ವಾದ ಮಂಡಿಸಲು ನಾಲ್ಕು ಮಂದಿ ವಿಶೇಷ ಸರಕಾರಿ ವಕೀಲರ ತಂಡವನ್ನು ನೇಮಕ ಮಾಡಲಾಗಿದೆ. ಪ್ರಕರಣದ ಪ್ರತಿಯೊಂದು ಹಂತವನ್ನು ಚರ್ಚಿಸಲಾಗಿದೆ ಎಂದು ಭಾಟಿಯಾ ವಿವರಣೆ ನೀಡಿದ್ದಾರೆ.

ಪ್ರಕರಣದ ವ್ಯಾಪ್ತಿ ವಿಶಾಲವಾಗಿದ್ದು, ಅಹಮದಾಬಾದ್‌ ಸರಣಿ ಸ್ಫೋಟದಲ್ಲಿ ಭಾಗಿಯಾದವರು ಮತ್ತಿತರ ಬಾಂಬ್‌ಸ್ಫೋಟಗಳಲ್ಲಿ ಭಾಗಿಯಾಗಿರುವ ಸಾಧ್ಯತೆಗಳಿವೆ. ಆದ್ದರಿಂದ ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಲು ವಿಶೇಷ ಅಧಿವೇಶನಕ್ಕಾಗಿ ನ್ಯಾಯಾಲಯವನ್ನು ವಿಂತಿಸಲಾಗುವುದು ಎಂದು ಭಾಟಿಯಾ ತಿಳಿಸಿದ್ದಾರೆ.

ಅಹಮದಾಬಾದ್ ಸರಣಿ ಸ್ಫೋಟದ ರೂವಾರಿ ಮುಫ್ತಿ ಅಬು ಬಶೀರ್ ಸೇರಿದಂತೆ ಬಂಧಿತ ಸಿಮಿ ಕಾರ್ಯಕರ್ತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭಾಟಿಯಾ ಹೇಳಿದ್ದಾರೆ.
ಮತ್ತಷ್ಟು
ಜಮ್ಮು: ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ
ಪ್ರತ್ಯೇಕತೆ ಪರ ವಾದಿಸುವ ಬುದ್ಧಿಜೀವಿಗಳಿಗೆ ಎಚ್ಚರಿಕೆ
ಉಗ್ರರಿಂದ ಐವರ ಹತ್ಯೆ, ಜಮ್ಮುವಿನಲ್ಲಿ ಕಟ್ಟೆಚ್ಚರ
ಚಿರಂಜೀವಿ ಪಕ್ಷದಿಂದ ಕಾಂಗ್ರೆಸ್‌ಗೆ ಹಾನಿಯಿಲ್ಲ: ಮೊಯ್ಲಿ
'ಪ್ರಜಾ ರಾಜ್ಯಂ' ಪಕ್ಷದ ಪ್ರಣಾಳಿಕೆ
ಚಿರಂಜೀವಿ 'ಪ್ರಜಾರಾಜ್ಯಂ' ಉದ್ಘಾಟನೆ