ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಗೋದ್ರಾನಂತರದ ಹಿಂಸಾಚಾರ: ಸು.ಕೋಗೆ ವರದಿ ಸಲ್ಲಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೋದ್ರಾನಂತರದ ಹಿಂಸಾಚಾರ: ಸು.ಕೋಗೆ ವರದಿ ಸಲ್ಲಿಕೆ
ಗೋದ್ರಾ ಘಟನೆಯ ಬಳಿಕ ನಡೆದ ಕೋಮು ಹಿಂಸಾಚಾರ ಕುರಿತಂತೆ ಮರುತನಿಖೆ ನಡೆಸಲು ನೇಮಿಸಲಾದ ಐವರು ವಿಶೇಷ ತನಿಖಾಧಿಕಾರಿಗಳ ತಂಡ ಸುಪ್ರೀಂ ಕೋರ್ಟಿಗೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ.

ತನಿಖೆಯಲ್ಲಿ ಆರೋಪಿಗಳ ರಕ್ಷಣೆ ಮಾಡಲಾಗಿದೆ ಎನ್ನುವ ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ಅಪೆಕ್ಸ್ ನ್ಯಾಯಾಲಯ ಮರುತನಿಖೆಗಾಗಿ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಿತ್ತು. ತನಿಖೆ ನಡೆಸಿದ ವಿಶೇಷ ಅಧಿಕಾರಿಗಳ ತಂಡ ಹರೀಶ ಸಾಳ್ವೆಯವರ ಮೂಲಕ ಅಪೆಕ್ಸ್ ನ್ಯಾಯಾಲಯಕ್ಕೆ ಗೋಪ್ಯ ವರದಿಯನ್ನು ಸಲ್ಲಿಸಿದೆ.

ಗೋದ್ರಾ, ಗುಲ್ಮಾರ್ಗ್ ಸೂಸೈಟಿ, ನರೋಡಾ ಗಾಂವ್, ನರೋಡಾ ಪಟ್ಯಾ, ಸರ್ದಾರಪುರಾ, ಓಡಿಎಚ್, ದಿಪ್ಲಾ ದರವಾಜಾ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಕೋಮಗಲಭೆಯಲ್ಲಿ ಹತ್ಯೆ ಮಾಡಲಾಗಿದೆ ಎನ್ನುವ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವಿಶೇಷ ತನಿಖಾ ತಂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮುಂಬರುವ ಡಿಸೆಂಬರ್ 31ರೊಳಗೆ ತನಿಖೆಯನ್ನು ಮುಕ್ತಾಯಗೊಳಿಸಲು ಹೆಚ್ಚಿನ ಸಮಯಾವಕಾಶ ನೀಡಲಾಗಿದೆ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್, ಪಿ. ಸದಾಶಿವನ್ ಮತ್ತು ಅಫ್ತಾಬ್ ಆಲಂ ಅವರೊನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ಹೇಳಿದೆ.

ಗುಜರಾತ್‌ನ ಐಪಿಎಸ್ ಅಧಿಕಾರಿಗಳಾದ ಗೀತಾ ಜೋಹ್ರಿ, ಶಿವಾನಂದ ಝಾ, ಮತ್ತು ಆಶಿಶ್ ಭಾಟಿಯಾ ಮತ್ತು ಮಾಜಿ ಸಿಬಿಐ ಮುಖ್ಯಸ್ಥ ಆರ್.ಕೆ ರಾಘವನ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಿ.ವಿ.ಸತ್ಪತಿ ಅವರು ಸೇರಿದಂತೆ ಐವರು ವಿಶೇಷ ತಂಡದಲ್ಲಿದ್ದಾರೆ.
ಮತ್ತಷ್ಟು
ಬಂಧಿತರ ವಿರುದ್ಧ ಬಿಗಿ ಕ್ರಮ: ಕ್ರೈಮ್ ಬ್ರ್ಯಾಂಚ್
ಜಮ್ಮು: ಎನ್‌ಕೌಂಟರ್‌ಗೆ ಓರ್ವ ಉಗ್ರ ಬಲಿ
ಪ್ರತ್ಯೇಕತೆ ಪರ ವಾದಿಸುವ ಬುದ್ಧಿಜೀವಿಗಳಿಗೆ ಎಚ್ಚರಿಕೆ
ಉಗ್ರರಿಂದ ಐವರ ಹತ್ಯೆ, ಜಮ್ಮುವಿನಲ್ಲಿ ಕಟ್ಟೆಚ್ಚರ
ಚಿರಂಜೀವಿ ಪಕ್ಷದಿಂದ ಕಾಂಗ್ರೆಸ್‌ಗೆ ಹಾನಿಯಿಲ್ಲ: ಮೊಯ್ಲಿ
'ಪ್ರಜಾ ರಾಜ್ಯಂ' ಪಕ್ಷದ ಪ್ರಣಾಳಿಕೆ